ಮಂಗಳೂರು: ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಮೋರ್ಚಾಗಳ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದೆ.
ಬಿಜೆಪಿಯ ದ.ಕ.ಜಿಲ್ಲೆಯ ಜಿಲ್ಲಾ ವಕ್ತಾರರಾಗಿ ಕೃಷ್ಣಪ್ಪ ಪೂಜಾರಿ, ಹಿಂದುಳಿದ ವರ್ಗ ಮೋರ್ಚಾಕ್ಕೆ ಜಿಲ್ಲಾಧ್ಯಕ್ಷರಾಗಿ ಮಹೇಶ್ ಜೋಗಿ, ಪ್ರಧಾನ ಕಾರ್ಯದರ್ಶಿಗಳಾಗಿ ಮೋನಪ್ಪ ದೇವಸ್ಯ, ಶಶಿಧರ ಕಲ್ಮಂಜ, ಮಹಿಳಾ ಮೋರ್ಚಾಕ್ಕೆ ಪ್ರಧಾನ ಕಾರ್ಯದರ್ಶಿಗಳಾಗಿ ಸಂಧ್ಯಾ ವೆಂಕಟೇಶ್, ಲಿಖಿತಾ ಆರ್. ಶೆಟ್ಟಿ, ಯುವ ಮೋರ್ಚಾಕ್ಕೆ ಪ್ರಧಾನ ಕಾರ್ಯದರ್ಶಿಗಳಾಗಿ ಭರತ್ ರಾಜ್ ಕೃಷ್ಣಾಪುರ, ಉಮೇಶ್ ಕುಲಾಲ್, ಎಸ್.ಟಿ. ಮೋರ್ಚಾಕ್ಕೆ ಪ್ರಧಾನ ಕಾರ್ಯದರ್ಶಿಗಳಾಗಿ ಜಯರಾಮ ಕಂಟ್ರಕಲ, ಪೂವಪ್ಪ ನಾಯ್ಕ್ ಆಲಂಗಾರು ನೇಮಕಗೊಂಡಿದ್ದಾರೆ.
ಎಸ್.ಸಿ.ಮೋರ್ಚಾಕ್ಕೆ ಪ್ರಧಾನ ಕಾರ್ಯದರ್ಶಿಗಳಾಗಿ ಉಮೇಶ್ ಕೋಟ್ಯಾನ್ ವಾಮಂಜೂರು, ಸಿ.ಕೆ.ಚಂದ್ರಕಲಾ ಹಾಗೂ ರೈತ ಮೋರ್ಚಾಕ್ಕೆ ಪ್ರಧಾನ ಕಾರ್ಯದರ್ಶಿಗಳಾಗಿ ನಾಗರಾಜ ಪೂಜಾರಿ ಒಂಟಿಕಟ್ಟೆ, ರಾಧಾಕೃಷ್ಣ ಬೋರ್ಕರ್ ನೇಮಕಗೊಂಡಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ತಿಳಿಸಿದ್ದಾರೆ.