ಪುತ್ತೂರು: ಬಲ್ನಾಡು ಕೃಷಿಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡಕ್ಕೆ ಭೂಮಿಪೂಜೆ ಗುರುವಾರ ನಡೆಯಿತು.
ಬಲ್ನಾಡು ಗ್ರಾಮದ ಬಿಳಿಯೂರುಕಟ್ಟೆಯಲ್ಲಿ ಸುಮಾರು 1.28 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಸಂಘದ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು. ರವಿಚಂದ್ರ ನೆಲ್ಲಿತ್ತಾಯ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ಗೌಡ ಶಿಲಾನ್ಯಾಸ ಮಾಡಿದರು.
ಈ ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಸೀತಾರಾಮ, ಉಪಾಧ್ಯಕ್ಷ ಅಬ್ದುಲ್ ಹಕೀಂ, ನಿರ್ದೇಶಕರಾದ ಕೆ.ಚಂದಪ್ಪ ಪೂಜಾರಿ, ಎ.ಯಂ.ಪ್ರಕಾಶ್ಚಂದ್ರ ಆಳ್ವ, ಎ.ಎಂ.ಪ್ರವೀಣ್ ಚಂದ್ರ ಆಳ್ವ, ಅಂಬ್ರೋಸ್ ಡಿ’ಸೋಜಾ, ನವೀನ ಕರ್ಕೇರಾ, ಸೀತಾರಾಮ, ಪ್ರಮೋದ ಬಿ., ಸುರೇಶ್ ಎನ್., ವಿನಯ, ಶುಕವಾಣಿ, ಪ್ರಮುಖರಾದ ಚನಿಲ ತಿಮ್ಮಪ್ಪ ಶೆಟ್ಟಿ, ಕೃಷ್ಣಪ್ರಸಾದ್ ಭಂಡಾರಿ, ಸಾಜ ರಾಧಾಕೃಷ್ಣ ಆಳ್ವ, ಮುರಳೀಕೃಷ್ಣ ಹಸಂತಡ್ಕ, ಪರಮೇಶ್ವರಿ ಬಿ.ಆರ್. ಗೌರಿಶಂಕರ ರೈ ಎನ್.ಜಿ., ಕಿರಣ್ ಕುಮಾರ್ ರೈ, ನಾರಾಯಣ ಗೌಡ ಕುಕ್ಕುತ್ತಡಿ, ಪ್ರಭಾಕರ್ ಎಂ.ಎನ್. ಕಂಟ್ರಾಕ್ಟರ್, ರೋಹಿತಾಕ್ಷ ಇಂಜಿನಿಯರ್, ಬಾಲಕೃಷ್ಣ ರೈ ಕೆಳಗಿನಮನೆ, ಬಾಲಸುಬ್ರಹ್ಮಣ್ಯ ಕೋಟ್ಯಾನ್, ಶಾಮಣ್ಣ ನಾಯಕ್, ಭಾಸ್ಕರ ಶೆಟ್ಟಿ, ಹರೀಶ್ಚಂದ್ರ ರೈ, ದಿವಾಕರ ರಾವ್, ಪೂರ್ಣಿಮಾ ಗೌಡ, ಜಯಂತಿ, ಮಲ್ಲಿಕಾ ಎಸ್.ರೈ., ಚಂದ್ರ ಕುಮಾರ್ ಬಿ., ದೇವದಾಸ ರೈ, ರಿತೇಶ್ ರೈ, ಅನಿಲ್ ರೈ, ಅಬ್ದುಲ್ ಹಮೀದ್, ಇದ್ದಿಕುಂಞ, ಸಿಬ್ಬಂದಿಗಳಾದ ಕೆ.ಶುಭ, ಪುಷ್ಪಾ ಎಂ., ಕೀರ್ತನ್ ಶೆಟ್ಟಿ, ಬಿಂದಿಯಾ, ವಿನೋದಾ ಮತ್ತಿತರರು ಉಪಸ್ಥಿತರಿದ್ದರು.