ಪುತ್ತೂರು: ಅಭಿವೃದ್ಧಿ ಹಿನ್ನಲೆಯಲ್ಲಿ ಮುಖ್ಯ ರಸ್ತೆಗಳನ್ನು ಅಗೆದು ತಿಂಗಳು ಮೂರು ಕಳೆದರೂ ಸಂಬಂಧ ಪಟ್ಟ ಇಲಾಖೆ ಇನ್ನೂ ಡಾಮರೀಕರಣ ಮಾಡಿಲ್ಲ. ಪರಿಣಾಮ ವಾಹನ ಸವಾರರು ಸಹಿತ ಸ್ಥಳೀಯ ಅಂಗಡಿ ಮುಂಗಟ್ಟುಗಳನ್ನು ಕೆಲಸ ಮಾಡುವವರು ಸಮಸ್ಯೆ ಎದುರಿಸುವಂತಾಗಿದೆ.
ಪುತ್ತೂರು-ಸುಬ್ರಹ್ಮಣ್ಯ ಸಂಪರ್ಕ ರಸ್ತೆಯ ಪುರುಷರಕಟ್ಟೆಯಲ್ಲಿ ಸುಮಾರು 50 ಮೀ. ಹಾಗೂ ನರಿಮೊಗರಿನಲ್ಲಿ 100-200 ಮೀಟರ್ ರಸ್ತೆಯನ್ನು ಡಾಮರೀಕರಣ ಮಾಡುವ ನಿಟ್ಟಿನಲ್ಲಿ ಕಳೆದ ಮೂರು ತಿಂಗಳ ಹಿಂದೆ ಅಗೆಯಲಾಗಿತ್ತು. ಅಲ್ಲಿಂದ ಇಲ್ಲಿ ತನಕ ರಸ್ತೆಯನ್ನು ಡಾಮರೀಕರಣ ಮಾಡದ ಪರಿಣಾಮ ಇಡೀ ಪರಿಸರ ಧೂಳುಮಯವಾಗಿದ್ದು, ಸ್ಥಳೀಯ ಪರಿಸರದಲ್ಲಿ ಅಂಗಡಿಗಳಲ್ಲಿ ಕೆಲಸ ಮಾಡುವವರು, ವಾಹನ ಸವಾರರು ಅನಾರೋಗ್ಯ ಕಾಡುವ ಭೀತಿಯಲ್ಲಿದ್ದಾರೆ.ಈ ಕುರಿತು ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಲಿಂಡ್ಸೆ ಕೊಲಿನ್ ಸಿಕ್ವೇರ ಅವರನ್ನು ಸಂಪರ್ಕಿಸಿದಾಗ ಫೆಬ್ರವರಿ 20, 2024ರ ಒಳಗಡೆ ಡಾಮರೀಕರಣ ಆಗಲಿದೆ ಎಂದು ತಿಳಿಸಿದ್ದಾರೆ.
ಕೇವಲ 50 ಮೀ. ರಸ್ತೆಯನ್ನು ಡಾಮರೀಕರಣ ಹಿನ್ನಲೆಯಲ್ಲಿ ಅಗೆದು ಮೂರು ತಿಂಗಳು ಕಳೆದರೂ ಡಾಮರೀಕರಣ ಮಾಡಲಾಗದಿದ್ದಲ್ಲಿ ಅಭಿವೃದ್ಧಿ ಅವಶ್ಯಕತೆ ಏನಿತ್ತು ಎಂದು ಸಾರ್ಜನಿಕರು ಪ್ರಶ್ನಿಸುವಂತಾಗಿದೆ. ಜತೆಗೆ ಹಿಡಿಶಾಪ ಹಾಕುತ್ತಿದ್ದಾರೆ.