ಪುತ್ತೂರು: ಮಹಿಳೆಯೊಬ್ಬರು ಸ್ನಾನದ ಕೊಠಡಿಯಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ಕೆಯ್ಯೂರು ಗ್ರಾಮದ ದೇವಿನಗರ ಜನತಾ ಕಾಲೋನಿಯಲ್ಲಿ ನಡೆದಿದೆ.
ಕಾಲೋನಿ ನಿವಾಸಿ ಅಣ್ಣು ಎಂಬವರ ಪತ್ನಿ ಲಲಿತಾ (42) ಮೃತಪಟ್ಟವರು.
ಲಲಿತಾ ಅವರು ಸ್ನಾನಕ್ಕೆ ತೆರಳಿದವರು ಹೊರಗೆ ಬಾರದೇ ಇದ್ದಾಗ ಸ್ನಾನದ ಕೊಠಡಿಯಲ್ಲಿ ನೋಡಿದಾಗ ರಕ್ತಸಿಕ್ತವಾಗಿ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.