ಪುತ್ತೂರು: ಅಡಿಕೆ ವ್ಯಾಪಾರಿ ಕರುಣಾಕರ ರೈ ಬಾಲ್ಯೊಟ್ಟುಗುತ್ತು ಬುಧವಾರ ನಿಧನರಾಗಿದ್ದಾರೆ.
ಬಾರಿಸು ಕನ್ನಡ ಡಿಂಡಿಮ ಸದಸ್ಯರಾಗಿದ್ದ ಕರುಣಾಕರ ಅವರು ರಾತ್ರಿ ಮನೆಯಲ್ಲಿ ಸ್ನಾನ ಮುಗಿಸಿ ಕುಳಿತಿದ್ದ ವೇಳೆ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.