ಪುತ್ತೂರು: ‘ಕ್ಯಾಂಪ್ಕೋ ಚಿತ್ತ ಸದಸ್ಯರ ಆರೋಗ್ಯದತ್ತ’ ಯೋಜನೆಯಡಿ ಸಂಸ್ಥೆಯ ಸಕ್ರಿಯ ಸದಸ್ಯ ಗಿರೀಶ್.ಪಿ. ಅವರ ತಾಯಿಯವರ ಆ್ಯಂಜಿಯೋಪ್ಲ್ಯಾಸ್ಟಿ ಚಿಕಿತ್ಸೆಯ ಸಹಾಯಧನದ ಮೊತ್ತ ಹಸ್ತಾಂತರಿಸಲಾಯಿತು.
ಸಹಾಯಧನ 50 ಸಾವಿರ ರೂಪಾಯಿಯ ಚೆಕ್ಕನ್ನು ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕ ರಾಘವೇಂದ್ರ ಭಟ್ ಕೆದಿಲ ಗಿರೀಶ್ ಅವರಿಗೆ ಪುತ್ತೂರು ಶಾಖೆಯಲ್ಲಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕಾವು-ಪುತ್ತೂರು ಪ್ರಾಂತೀಯ ವ್ಯವಸ್ಥಾಪಕ ಜಯರಾಮ ಶೆಟ್ಟಿ.ಎ., ಶಾಖಾ ಪ್ರಬಂಧಕ ಅಮರೇಶ್ ಪಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.