ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಾಸನಗಳನ್ನು ಸಂರಕ್ಷಿಸುವ, ಶಾಸನ ಮಂಟಪ ರಚನೆಗೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮನವಿ

ಪುತ್ತೂರು: ದೇವಸ್ಥಾನದ ಹೊರಪ್ರಾಂಗಣದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿ ಇರುವ ಪುರಾತನ ಶಾಸನಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ  ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಶಾಸನ ಮಂಟಪವನ್ನು ನಿರ್ಮಿಸುವ ಕುರಿತು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ದೇವಸ್ಥಾನ ಆಡಳಿತಾಧಿಕಾರಿ ನವೀನ್ ಭಂಡಾರಿ ಅವರಿಗೆ  ಮನವಿ ಮಾಡಿದ್ದಾರೆ.

ಮನವಿ ಪತ್ರದಲ್ಲಿ ಸದರಿ ಶಾಸನಗಳು ಸುಮಾರು 12ನೇ ಶತಮಾನಕ್ಕೆ ಸೇರಿದ ಪ್ರಾಚೀನ ಕನ್ನಡ ಶಾಸನಗಳಾಗಿವೆ. ಈ ಶಾಸನಗಳಿಂದಾಗಿ 12ನೇ ಶತಮಾನದಲ್ಲಿ ಪ್ರಚಲಿತದಲ್ಲಿ ಇದ್ದ ಕನ್ನಡ ಭಾಷೆ, ಲಿಪಿ, ರಾಜಾಡಳಿತ, ಆಚಾರ -ವಿಚಾರ, ಸಂಪ್ರದಾಯ, ಸಂಸ್ಕೃತಿ, ಧಾರ್ಮಿಕ ಆಚರಣೆಗಳು ಹಾಗೂ ಇನ್ನಿತರ ವಿಚಾರಗಳ ಮೇಲೆ ಬೆಳಕನ್ನು ಚೆಲ್ಲುವ ಈ ಶಾಸನಗಳಿಗೆ ಶಾಸನ ಮಂಟಪ ನಿರ್ಮಿತವಾದರೆ ರಾಜ್ಯ ಮಾತ್ರವಲ್ಲದೆ, ದೇಶ ವಿದೇಶಗಳ ನಾನಾ ಭಾಗಗಳಿಂದ ಇತಿಹಾಸ ಅಧ್ಯಯನ ಮಾಡುವ ಅಧ್ಯಯನಕಾರರು ಇಲ್ಲಿಗೆ ಆಗಮಿಸುತ್ತಾರೆ.  ಜೊತೆಗೆ ಸುತ್ತಮುತ್ತಲಿನ ಊರುಗಳಿಂದ ವಿದ್ಯಾರ್ಥಿಗಳು ಈ ಶಾಸನ ಮಂಟಪವನ್ನು ನೋಡಲು ತಂಡೋಪತಂಡವಾಗಿ ಬರಲಿದ್ದಾರೆ. ಇದರಿಂದಾಗಿ ಪುರಾತನ ಶಾಸನಗಳನ್ನು ಸಂರಕ್ಷಣೆ ಮಾಡಿದ ಸಾರ್ಥಕತೆ ಒಂದೆಡೆಯಾದರೆ ಪ್ರವಾಸೋದ್ಯಮವೂ ಬೆಳೆಯಲಿದೆ. ಇದು ಶಾಸನ ಮಂಟಪದ ಫಲಶ್ರುತಿಯಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಭವ್ಯ ಭಾರತದ ಜ್ಞಾನ ನಿಧಿ ಈ ಪುರಾತನ   ಶಾಸನ ಸಂರಕ್ಷಣೆಗಾಗಿ ಶಾಸನ ಮಂಟಪವನ್ನು ರಚಿಸಲು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿಗೆ ಅವಕಾಶ ನೀಡಬೇಕಾಗಿ ವಿನಂತಿಸಲಾಗಿದೆ. ಇಲ್ಲವಾದಲ್ಲಿ ಸದ್ರಿ ಯೋಜನೆಯನ್ನು ದೇವಳದ   ಕ್ರಿಯಾಯೋಜನೆಯಲ್ಲಿ ಅಳವಡಿಸಬೇಕಾಗಿ ವಿನಂತಿಸಲಾಗಿದೆ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top