ಫುಟ್ಬಾಲ್ ಆಟದಲ್ಲಿ ನಿರತರಾಗಿದ್ದಾಗ ಸಿಡಿಲು ಬಡಿತ | ಆಟಗಾರ ಮೃತ್ಯು

ಫುಟ್ಬಾಲ್ ಆಟಗಾರನೊಬ್ಬ ಆಟದಲ್ಲಿ ನಿರತರಾಗಿದ್ದ ವೇಳೆ ಸಿಡಿಲು ಬಡಿದು ಮೃತಪಟ್ಟ ಘಟನೆ ಇಂಡೋನೇಷ್ಯಾದ ಸಿಲಿವಾಂಗಿ ಸ್ಟೇಡಿಯಂನಲ್ಲಿ ನಡೆದಿದ್ದು, ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಫೆಬ್ರವರಿ 10ರಂದು ಘಟನೆ ನಡೆದಿದ್ದು, ಪಶ್ಚಿಮ ಜಾವಾದ ಬಮಡಂಗ್‌ನಲ್ಲಿರುವ ಸಿಲಿವಾಂಗಿ ಸ್ಟೇಡಿಯಂನಲ್ಲಿ ಫುಟ್ಬಾಲ್ ಪಂದ್ಯ ಏರ್ಪಡಿಸಲಾಗಿತ್ತು. ಈ ಸೌಹಾರ್ದದ ಪಂದ್ಯದ ವೇಳೆ ಏಕಾಏಕಿ ಮಳೆ ಪ್ರಾರಂಭವಾಯಿತು. ಈ  ವೇಳೆ ಸಿಡಿಲು ಬಡಿದು ಆಟಗಾರ ಮೈದಾನದಲ್ಲೇ ಕುಸಿದು ಬಿದ್ದಿದ್ದಾನೆ. ಕುಸಿತದ ಬಳಿಕ ಕೊಂಚ ಹೊತ್ತು ಉಸಿರಾಡಿದ್ದು, ಬಳಿಕ ಸಾವನ್ನಪ್ಪಿದ್ದಾನೆ. ಈ ಭಯಾನಕ ದೃಶ್ಯ  ಟ್ವಿಟ್ಟರ್‌ನಲ್ಲಿ ಹರಿದಾಡುತ್ತಿದೆ.

ಸಿಡಿಲು ಬಡಿದ ರಭಸಕ್ಕೆ ಆಟಗಾರನ ಜೆರ್ಸಿಯು ಸುಟ್ಟು ಕರಕಲಾಗಿದೆ. ಆಟಗಾರನನ್ನು ಸರಿನಿಂಗ್ಲಿಹ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರು ಅಷ್ಟರಲ್ಲಾಗಲೇ ಆತ ಸಾವನ್ನಪ್ಪಿದ್ದಾನೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top