ಭಾಗ-4
ಇದೇ ಸೂತ್ರಕ್ಕೆ ಅನುಗುಣವಾಗಿ ಬೇರೆ ಉದಾಹರಣೆಯನ್ನು ಗಮನಿಸೋಣ. ಪಶ್ಚಿಮ ಬಂಗಾಳದ ಬಗ್ಗೆ ಹೇಳುವುದಾದರೆ ಅಲ್ಲಿ ಬ್ರಾಹ್ಮಣರ ಜನಸಂಖ್ಯೆ ತುಂಬಾ ಕಡಿಮೆ. ಅಂದರೆ ಬ್ರಾಹ್ಮಣ ಜಾತಿಯಿಂದ ಬಂದಿರುವ ಮಮತ ಬಂಡೋಪಧ್ಯಾಯ, ಮಮತ ಬ್ಯಾನರ್ಜಿ ಕೂಡಾ ರಾಜೀನಾಮೆ ನೀಡಬೇಕಾಗುತ್ತದೆ ಮತ್ತು ಮುಸ್ಲಿಮರ ಜನಸಂಖ್ಯೆ ಯಾವಾಗಲೂ 27% ಇರುವಂತೆ ನೋಡಿಕೊಳ್ಳಬೇಕು. ಎ.ಐ.ಎಂ.ಐ.ಎಂ. ಪಕ್ಷದ ನಾಯಕ ಓಲೈಸಿ ಸಾಹೇಬ್ ಕೂಡಾ ತಮ್ಮ ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಹಾಗೆಯೇ ಎಲ್ಲಾ ಪ್ರಮುಖ ಸ್ಥಾನಗಳನ್ನು ಮುಸ್ಲಿಮರಿಗೆ ನೀಡಬೇಕು ಏಕೆಂದರೆ ಅವರ ಜನಸಂಖ್ಯೆಯೂ 85% ಆಗಿರುತ್ತದೆ.
ಭಾರತದಲ್ಲಿ ಕಾಶ್ಮೀರ ಬ್ರಾಹ್ಮಣರು ಸೂಕ್ಷ್ಮ ಅಲ್ಪಸಂಖ್ಯಾತರು ಅವರ ಜನಸಂಖ್ಯೆಗೆ ಅನುಗುಣವಾಗಿ ಅವರಿಗೆ ಅವರದೇ ಆದ ಹಕ್ಕುಗಳಿವೆ. ಸ್ವತಃ ಕಾಶ್ಮೀರ ಬ್ರಾಹ್ಮಣ ಎಂದು ಪರಿಗಣಿಸುವ ರಾಹುಲ್ ಗಾಂಧಿ ಅವರು ಇಂದು ಪ್ರಧಾನಿ ಅಭ್ಯರ್ಥಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ ಮತ್ತು ಅವರು ಕೇವಲ ಒಬಿಸಿ ಎಂದು ಹೇಳಬಹುದು. ಪರಿಶಿಷ್ಟ ಜಾತಿ ಅಥವಾ ಮುಸ್ಲಿಂ ಪಂಗಡದ ವ್ಯಕ್ತಿ ಪ್ರಧಾನಿ ಅಭ್ಯರ್ಥಿಯಾಗಬಹುದು. ಬಿಜೆಪಿಯವರನ್ನು ನೋಡಿ ದೂಷಿಸಲು ಸಹ ಸಾಧ್ಯವಿಲ್ಲ. ಪ್ರಧಾನಿ ಇನ್ನೂ ಒಬಿಸಿ ಆಗಿರುವುದರಿಂದ ಬಿಜೆಪಿ ಆಡಳಿತದಲ್ಲಿದೆ. ಭಾರತದ ರಾಷ್ಟ್ರಾಧ್ಯಕ್ಷರು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರಾಗಿದ್ದಾರೆ. ನಾನು ನಿಮ್ಮನ್ನು ಕೇಳಬಯಸುತ್ತೇನೆ ಯಾರು ಅಧಿಕಾರ ಮತ್ತು ಸ್ಥಾನವನ್ನು ಬಿಟ್ಟುಕೊಡಲು ಸಿದ್ಧರಿದ್ದಾರೆ? ಯಾದವರು ತಮ್ಮಅಧಿಕಾರ ಮತ್ತು ಸ್ಥಾನವನ್ನು ಬಿಟ್ಟುಕೊಡಲು ಸಿದ್ಧರಿದ್ದಾರೆಯೇ? ಅಶ್ರಫುಲ್ ಸಿದ್ಧರಿದ್ದಾರಾ? ರಾಹುಲ್ ಬಾಬಾ, ನಿತೀಶ್
ಮತ್ತು ಮಮತಾ ಬ್ಯಾನರ್ಜಿ ಅವರು ಬಿಹಾರದಲ್ಲಿ ನಡೆಸುತ್ತಿರುವ ತಂತ್ರಕ್ಕೆ ಈ ಜನರು ಸಿದ್ಧರಾಗುತ್ತಾರೆಯೇ? ಜಾತಿಯ ಮೇಕಪ್ ಸಂಪೂರ್ಣ ಭಿನ್ನವಾಗಿರುವ ಉತ್ತರಪ್ರದೇಶದಲ್ಲಿ ಈ ತಂತ್ರ ಫಲಿಸಲಿದೆಯೇ? ಇಡೀ ಭೂಮಿಯನ್ನು ನಿಯಂತ್ರಿಸುವ ಕೆಲವು ಜಾತಿಗಳಿರುವ ಪಂಜಾಬ ಮತ್ತು ತಮಿಳುನಾಡಿನಂತಹ ರಾಜ್ಯಗಳಲ್ಲಿ ಈ ತಂತ್ರವು ಕಾರ್ಯ ನಿರ್ವಹಿಸಲಿದೆಯೇ? ತಮಿಳುನಾಡಿನಲ್ಲಿ ದಲಿತರ ಜನಸಂಖ್ಯೆ 20%, ಇವರು ಕೇವಲ 7% ಭೂಮಿಯನ್ನು ಮಾತ್ರ ಹೊಂದಿದ್ದಾರೆ.
ಪಂಜಾಬಿನಲ್ಲಿರುವ ಪ್ರಬಲ ಜಾತಿಯೆಂದರೆ ಜಾಟ್ ಸಿಖ್‌ರು, ಇವರು ಇಡೀ ಪಂಜಾಬನ್ನು ತಮ್ಮ ಹತೋಟಿಯಲ್ಲಿ ಇಟ್ಟುಕೊಂಡಿದ್ದಾರೆ. ಪಂಜಾಬಿನಲ್ಲಿರುವ ದಲಿತರ ಜನಸಂಖ್ಯೆ 32% ಇವರು ಪಂಜಾಬಿನಲ್ಲಿ ಹೊಂದಿರುವ ಭೂಮಿ 3.5% ಮಾತ್ರ. ಈಗ ಇಲ್ಲಿರುವ ಪ್ರಶ್ನೆ ಡಾಟ್ ಅಲೆಯನ್ಸ್ ಪಂಜಾಬಿನ ಜಾಟ್ ಜನಾಂಗಕ್ಕೆ ತಮ್ಮ ಭೂಮಿಯನ್ನು ದಲಿತರಿಗೆ ಹಂಚಲು ಹೇಳುತ್ತದೆಯೇ? ತಮಿಳುನಾಡಿನಲ್ಲೂ ಇದೇ ಪರಿಸ್ಥಿತಿ, ಪ್ರಬಲ ಪಂಗಡದವರು ಭೂಮಿಯನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿರುತ್ತಾರೆ. ಪ್ರಬಲವರ್ಗದವರು ಉಚಿತವಾಗಿ ಈ ಭೂಮಿಯನ್ನು ದಲಿತರಿಗೆ ಹಂಚಲು ಸಿದ್ಧರಿದ್ದಾರೆಯೇ?
ಇವರೆಲ್ಲರ ಪ್ರಮುಖ ಪ್ರಶ್ನೆಯೆಂದರೆ, ಜನರು ಇಡೀ ದೇಶದ ಜನಸಂಖ್ಯೆಯಷ್ಟು ಹಕ್ಕುಗಳನ್ನು ಬಯಸಿದರೆ, ಆಗ ಹಿಂದುಗಳ ಜನಸಂಖ್ಯೆಯು ಭಾರತದಲ್ಲಿ 80% ಇರುವುದರಿಂದ ಭಾರತದಲ್ಲಿ ಹಿಂದೂಗಳಿಗೆ ಗರಿಷ್ಠ ಹಕ್ಕು ಸಿಗಬಹುದೇ? ಇದನ್ನೇ ರಾಹುಲ್ ಗಾಂಧಿಯವರು ಹೇಳುತ್ತಿದ್ದಾರೆಯೇ? ಇಲ್ಲ, ಖಂಡಿತವಾಗಿಯೂ ಆ ರೀತಿಯ ಕನಸು ಕಾಣಲು ಸಾಧ್ಯವಿಲ್ಲ. ಒಂದು ವೇಳೆ ಹಾಗೆ ಆದರೆ ರಾಹುಲ್ ಗಾಂಧಿ ಹಿಂದೂ ರಾಷ್ಟ್ರದ ಅತಿ ದೊಡ್ಡ ಬೆಂಬಲಿಗರಾಗಿ ಹೊರಹೊಮ್ಮುತ್ತಾರೆ ಮತ್ತು ಮೋದೀಜಿ ಅಲ್ಲ. ರಾಹುಲ್‌ಗಾಂಧಿಯವರು ಈಗಾಗಲೇ ಜಾತಿ ಗಣತಿಗೆ ಮುಂದಾಗಿದ್ದಾರೆ. ಈ ವಿಚಾರದಲ್ಲಿ ಕ್ರೆಡಿಟ್ ಪಡೆದುಕೊಳ್ಳುವುದಕ್ಕೋಸ್ಕರ ಡಾಟ್ ಅಲೆಯನ್ಸ್ ನಲ್ಲಿಯೂ ಫೈಟ್ ನಡೆಯುತ್ತಿದೆ. ಇದರಲ್ಲಿ ರಾಹುಲ್ ಗಾಂಧಿ ಹಾಗೂ ಹಲವು ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದಾರೆ.
ಈ ರೀತಿಯ ಐಡಿಯಾವನ್ನು ನೀಡಿದಕ್ಕೋಸ್ಕರ ಕೆಲವರು ರಾಹುಲ್ ಗಾಂಧಿಗೆ ಮನ್ನಣೆ ನೀಡಿದರೆ, ಜೆಡಿಯು ನ ಅನೇಕ ದೊಡ್ಡ ನಾಯಕರು ನಿತೀಶ್ ಜಿ ಗೆ ಕ್ರೆಡಿಟ್ ನೀಡುತ್ತಿದ್ದಾರೆ. ನಾನು ಏನನ್ನು ಹೇಳಲು ಬಯಸುತ್ತೇನೆಂದರೆ ಜಾತಿಗಣತಿಯ ಈ ಐಡಿಯಾದಿಂದ ಜಾತಿ ಅಥವಾ ಅಲ್ಪಸಂಖ್ಯಾತ ಚುನಾವಣೆಗಳ ಆಧಾರದ ಮೇಲೆ ನಡೆಯುವ ಎಲ್ಲಾ ಪಕ್ಷಗಳಾದ ಎಸ್ ಪಿ, ಬಿಎಸ್‌ಪಿ, ಆರ್‌ಜೆಡಿ, ಡಿಎಂಕೆ, ಅಕಾಲಿದಳ, ಜೆಡಿಯು, ಎಐಎಂಐಎಂ ಮತ್ತು ಕಾಂಗ್ರೆಸ್ ಗೆ ಹಿನ್ನಡೆಯಾಗಬಹುದು. ಈ ರೀತಿ ಮಾಡುವುದರಿಂದ ಬಿಜೆಪಿಯ ಕೆಲವು ಮತಗಳನ್ನು ಕಸಿದುಕೊಳ್ಳಬಹುದು. ಆದರೆ ದೀರ್ಘಾವಧಿಯಲ್ಲಿ ದೇಶವು ಹಾಳಾಗುತ್ತದೆ.
ಅಶ್ವಿನ್ ಎಲ್. ಶೆಟ್ಟಿ, BE, ME, DPT, MBA, LLB
ಆಡಳಿತಾಧಿಕಾರಿಗಳು, ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು, ಸವಣೂರು
(ಮುಂದುವರಿಯುವುದು)