ಕೆದಿಲ: ಕೆದಿಲ ಗ್ರಾಮದ ನಿವೃತ್ತ ಯೋಧ ಶಿವರಾಮ್ ಭಟ್ ಮತ್ತು ಅವರ ಪತ್ನಿ ಸವಿತಾ ಭಟ್ ರಿಗೆ ಜಾಗದ ವಿಚಾರವಾಗಿ ಅನ್ಯಕೋಮಿನ ತಂಡವೊಂದು ಹಲ್ಲೆ ನಡೆಸಿದ್ದು, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು ಶಾಮೀಲಾಗಿರುವುದು ಖೇದಕರ ಎಂದು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಕೃಷ್ಣ ಆಳ್ವಾ ಹೇಳಿದ್ದಾರೆ.
ಅವರು ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದ ನಿವೃತ್ತ ಯೋಧರ ಪತ್ನಿ ಅವರ ಬಳಿ ತೆರಳಿ ಮನೆಯವರಿಗೆ ಧೈರ್ಯ ತುಂಬಿದರು.
ಕೃಷಿ ಕೆಲಸ ಮಾಡಿಕೊಂಡು, ಅನೇಕ ವರ್ಷದಿಂದ ವಾಸ ಮಾಡುತ್ತಾ ಬಂದಿರುವ ಕುಟುಂಬ ತಮ್ಮದೇ ಜಾಗದಲ್ಲಿ ಭಯಭೀತಿಯಿಂದ ಬದುಕಬೇಕಾಗಿ ಬಂದಿರುವುದು ಆತಂಕಕಾರಿ ವಿಷಯ ಎಂದು ಮನೆಯವರು ಸಾಜ ರಾಧಾಕೃಷ್ಣ ಅವರಲ್ಲಿ ತಿಳಿಸಿದರು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಪೋಲೀಸ್ ಇಲಾಖೆಯು ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕಾಗಿ ಮನೆಯವರು ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಪುತ್ತೂರು ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಪ್ರಧಾನ ಕಾರ್ಯದರ್ಶಿ ನಿತೀಶ್ ಶಾಂತಿವನ, ಕೆದಿಲ ಶಕ್ತಿ ಕೇಂದ್ರ ಸಂಚಾಲಕ ಪದ್ಮನಾಭ ಭಟ್ ಉಪಸ್ಥಿತರಿದ್ದರು.