ಚಿಂತೆಯ ಬದಲು ಚಿಂತನೆ ಮಾಡೋಣ: ಕೊಂಡೆವೂರು ಶ್ರೀಗಳು | ಬಂಟ್ವಾಳ ಮೆಲ್ಕಾರ್ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಮೆಲ್ಕಾರ್ ಕೇಂದ್ರ ಸಮಿತಿ ಸಭೆ

ಬಂಟ್ವಾಳ: ಹಿರಿಯರ ಅನುಭವವು ನಂಬಿಕೆಯ ಜೊತೆಗೆ ಮಿಳಿತವಾದಾಗ ಜೀವನವು ಅರ್ಥಪೂರ್ಣವಾಗುತ್ತದೆ. ಚಿಂತೆಯ ಬದಲು ಎಲ್ಲರೂ ಚಿಂತನೆಯನ್ನು ಮಾಡಲು ಹಿರಿಯರ ಪ್ರತಿಷ್ಠಾನ ನಡೆಸುವ ಕಾರ್ಯಗಳು ಸಮಾಜದ ಒಳಿತಿಗೆ ದೊಡ್ಡ ಕೊಡುಗೆಯಾಗಿದೆ.  ಸಂಸ್ಕೃತಿಯ ರಕ್ಷಣೆಗೆ ಹಿರಿಯರ ಮಾರ್ಗದರ್ಶನವು ಇಂದಿನ ಅಗತ್ಯವಾಗಿದೆ ಎಂದು ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಮೆಲ್ಕಾರ್ ಬಂಟ್ವಾಳದ ಕೇಂದ್ರ ಸಮಿತಿ ಸಭೆಯನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ, ಆಶೀರ್ವಚನ ನೀಡಿದರು.

ಆಶ್ರಮದ ಮೂಲಕ ಪರಿಸರದಲ್ಲಿ ಅನ್ನ, ಅಕ್ಷರ, ಆಧಾರ, ಆಶ್ರಯ ಮತ್ತು ಆರೋಗ್ಯ ಯೋಜನೆಯ ಸೇವಾ ಕಾರ್ಯಗಳು ನಿರಂತರವಾಗಿ ನಡೆಯುತ್ತಿದ್ದು ಈ ಪರಿಸರದಲ್ಲಿ ಹಿರಿಯರ ಸೇವಾ ಪ್ರತಿಷ್ಠಾನದ ಘಟಕವನ್ನು ಆರಂಭಿಸಲು ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.



































 
 

ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಕೆಯ್ಯೂರು ನಾರಾಯಣ ಭಟ್ ಮಾತನಾಡಿ, ತಾಲೂಕು ಘಟಕಗಳನ್ನು ಸಕ್ರಿಯಗೊಳಿಸುವುದರೊಂದಿಗೆ ಸಹಕಾರಿ ಸಂಘದ ಸ್ಥಾಪನೆಯ ಬಗ್ಗೆ ಮಾಹಿತಿ ನೀಡಿ ಪ್ರತಿಷ್ಠಾನದ ಸದಸ್ಯರು ಪ್ರವರ್ತಕರಾಗಿ ಸಹಕರಿಸಬೇಕೆಂದು ತಿಳಿಸಿದರು.

ಡಾ. ಬಿ .ಯನ್ ಮಹಾಲಿಂಗ ಭಟ್ ಕುಮಾರವ್ಯಾಸ ನಮನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ರಾಮಾಯಣದಲ್ಲಿ ಶ್ರೀರಾಮನ ಆದರ್ಶ ಗುಣಗಳ ಬಗ್ಗೆ ಮಾತನಾಡಿದರು. ಪ್ರೊ. ವೇದವ್ಯಾಸ  ರಾಮಕುಂಜ ಮಿರಾಕಲ್ ಹೆಣ್ಣಿನ ಮಹತ್ವದ ಬಗ್ಗೆ ತಿಳಿಸಿ ಪ್ರಾತ್ಯಕ್ಷಿಕೆ ನೀಡಿದರು.

ಬಂಟ್ವಾಳ ಘಟಕದ ಅಧ್ಯಕ್ಷ ಸೀತಾರಾಮ ಶೆಟ್ಟಿ ಕಾಂತಾಡಿ, ಸಮಿತಿ ಸದಸ್ಯ ಭವಾನಿ ಶಂಕರ ಶೆಟ್ಟಿ ಪುತ್ತೂರು, ಉದಯಶಂಕರ ಪುಣಚ ಮತ್ತು ಸ್ಥಳೀಯ ಹಿರಿಯರು ಭಾಗವಹಿಸಿದ್ದರು.

ಸಮಿತಿಯ ಸದಸ್ಯ ಅನಾರು ಕೃಷ್ಣಶರ್ಮ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ್ ಆಳ್ವ ಪಡುಮಲೆ ವಂದಿಸಿದರು. ಬಳಿಕ ಆಶ್ರಮದ ಗೋಶಾಲೆ ಮತ್ತು ನಕ್ಷತ್ರವನವನ್ನು ಹಿರಿಯರು ವೀಕ್ಷಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top