ಫೆ.17 : ರಾಜ್ಯಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆ | ವಿಟ್ಲದಲ್ಲಿ ನಡೆಯಿತು ಪೂರ್ವಭಾವಿ ಸಭೆ

ವಿಟ್ಲ: ಫೆ.17ರಂದು ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ‘ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶದ ಪೂರ್ವಭಾವಿ ಸಭೆ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.

ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ, ವಿಟ್ಲ-ಉಪ್ಪಿನಂಗಡಿ ಬ್ಲಾಕಿನಿಂದ ಸರ್ಕಾರದ ವಿವಿಧ ಸಮಿತಿ, ಮಂಡಳಿಗೆ ನಾಮ ನಿರ್ದೇಶೀತರಾದ ಪಕ್ಷದ ಪ್ರಮುಖರಾದ ಜಗನ್ನಾಥ್ ಶೆಟ್ಟಿ ನಡುಮನೆ, ನಿರಂಜನ್ ರೈ ಮಠಂದಬೆಟ್ಟು, ದಾಮೋದರ್ ಮುರ, ಅಬ್ದುಲ್ ರಹಿಮಾನ್ ಯುನಿಕ್, ರಾಮಣ್ಣ ಪಿಲಿಂಜ, ಮೊಹಮ್ಮದ್ ಇಕ್ಬಾಲ್, ಶ್ರೀನಿವಾಸ್ ಶೆಟ್ಟಿ ಕೊಲ್ಯ, ಸುನಿತಾ ಕೋಟ್ಯಾನ್, ಅಸ್ಮಾ ಉಮರ್, ಅಬ್ದುಲ್ ರಹಿಮಾನ್ ಕುರುಂಬಳರನ್ನು ಸನ್ಮಾನಿಸಲಾಯಿತು.

ಸಭೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್. ಮೊಹಮ್ಮದ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಳ್ವ, ಸದಸ್ಯರಾದ ಅಶ್ರಫ್ ಬಸ್ತಿಕರ್, ರಮಾನಾಥ್ ವಿಟ್ಲ, ವಿಟ್ಲ-ಉಪ್ಪಿನಂಗಡಿ ಬ್ಲಾಕ್‍ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ ಕೆ.ಬಿ., ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ವಿ.ಕೆ.ಎಂ. ಅಶ್ರಫ್, ವಿ. ಅಬ್ದುಲ್ ರಹಿಮಾನ್, ಡಿಕಯ್ಯ ಸುರಲಿಮೂಲೆ, ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಅಳಿಕೆ, ಮಾಣಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಧರ್ ಪೂಜಾರಿ ಬಾಳೆಕಲ್ಲು, ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕರೀಂ ಕುದ್ದುಪದವು, ಬ್ಲಾಕ್ ಹಿಂದುಳಿದ ಘಟಕದ ಅಧ್ಯಕ್ಷ ಮೋಹನ್ ಗುರ್ಜಿನಡ್ಕ ಸೇರಿದಂತೆ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top