ಕಡಬ: ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘ ಪ್ರವರ್ತಿತ ಸ್ಪಂದನಾ ಸಮುದಾಯ ಸಹಕಾರ ಸಂಘದ ಸಾಮಾನ್ಯ ಮಹಾಸಭೆ ಭಾನುವಾರ ಕಡಬ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಕೇಶವ ಎ. ಕಲಾಯಿಗುತ್ತು ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರ ಸಂಘದಲ್ಲಿ ಈಗಾಗಲೇ 1088 ಸದಸ್ಯರಿದ್ದು, 28.70 ಲಕ್ಷ ಪಾಲು ಬಂಡವಾಳ ಹೊಂದಿದೆ. 106800 ಶೇರು ಶುಲ್ಕ, 53400 ರೂ. ನೋಂದಣಿ ಶುಲ್ಕ ಸಂಗ್ರಹಿಸಲಾಗಿದೆ. ಸದಸ್ಯರಿಂದ ಉಳಿತಾಯ ಖಾತೆ ತೆರೆದು 22 ಖಾತೆಯಲ್ಲಿ 6150 ರೂ. ಹಾಗೂ ನಿರಖು ಠೇವಣಿ ಎರಡು ಖಾತೆಯಲ್ಲಿ 7 ಲಕ್ಷ ರೂ. ಸಂಗ್ರಹವಾಗಿದೆ. ಈ ಪೈಕಿ ಸಂಘದ ಕಚೇರಿಗೆ ಅಗತ್ಯ ಸ್ಥಿರಾಸ್ತಿ ಹಾಗೂ ಚರಾಸ್ತಿ ಖರೀದಿಗೆ 14,84,487 ರೂ. ಖರ್ಚು ಮಾಡಲಾಗಿದೆ. ವ್ಯವಹಾರ ಅಭಿವೃದ್ಧಿಗೆ 2,38,416 ಖರ್ಚು ಮಾಡಲಾಗಿದೆ. ಉಳಿಕೆ ಹಣ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಕಡಬ ಶಾಖೆಯಲ್ಲಿ ಜಮೆಯಾಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಸ್ಥಾಪಕಾಧ್ಯಕ್ಷ ಸುರೇಶ್ ಬೈಲು, ಸ್ಪಂದನಾ ಸಮುದಾಯ ಸಹಕಾರ ಸಂಘದ ಉಪಾಧ್ಯಕ್ಷ ಚೇತನ್ ಆನೆಗುಂಡಿ, ನಿರ್ದೇಶಕರಾದ ಚಂದ್ರಶೇಖರ ಸಣ್ಣಾರ, ಶೇಖರ ಗೌಡ ಕೆ., ನಾಗೇಶ್ ಕೆಡೆಂಜಿ, ರೋಹಿತ್ ಎಚ್.ಎಚ್., ಗೋಪಾಲ ಎಣ್ಣೆಮಜಲು, ಪಿ.ಕಾಂತಪ್ಪ ಗೌಡ, ಗೀತಾ ಕುಮಾರಿ ಕೇವಳ, ಹಿರಿಯಣ್ಣ ಗೌಡ ಎ., ಆಶಾ ತಿಮ್ಮಪ್ಪ ಗೌಡ, ದಾಮೋದರ ಪಿ., ಲೋಕೇಶ್ ಬಿ.ಎನ್., ಗೌರವ ಸಲಹೆಗಾರರಾದ ಚಂದ್ರಶೇಖರ ಗೌಡ ಕೋಡಿಬೈಲು, ಕೃಷ್ಣಪ್ಪ ಗೌಡ ಕೆಂಜಾಳ ಉಪಸ್ಥಿತರಿದ್ದರು.
ಸಭೆಯಲ್ಲಿ ಸಂಘದ ಸದಸ್ಯರು ಭಾಗವಹಿಸಿದ್ದರು.