ಅಡ್ಯನಡ್ಕ ಕರ್ನಾಟಕ ಬ್ಯಾಂಕ್‍ ನಲ್ಲಿ ಕೋಟ್ಯಾಂತರ ನಗ-ನಗದು ಕಳ್ಳತನ | ಇಬ್ಬರು ಪೊಲೀಸ್ ವಶಕ್ಕೆ

ವಿಟ್ಲ : ಕರ್ನಾಟಕ ಬ್ಯಾಂಕ್‌  ಅಡ್ಯನಡ್ಕ ಶಾಖೆಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿಸಿದು ಬಂದಿದೆ.

ಕಳೆದ ವಾರದಲ್ಲಿ ಕರ್ನಾಟಕ ಬ್ಯಾಂಕ್‍ ನ ಕಿಟಕಿಯನ್ನು ತುಂಡರಿಸಿ ಒಳನುಗ್ಗಿದ ಕಳ್ಳರು ಕೋಟ್ಯಾಂತರ ನಗ-ನಗದು ಕಳ್ಳತನ ಮಾಡಿ ಪರಾರಿಯಾಗಿದ್ದರು. ಬಳಿಕ ತನಿಖೆ ಕೈಗೆತ್ತಿಕೊಂಡ ಪೊಲೀಸ್‌ ಇಲಾಖೆಯ ವಿಶೇಷ ತಂಡ ಬ್ಯಾಂಕ್ ಹಾಗೂ ಅಕ್ಕಪಕ್ಕ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದೆ. ಈ ಆಧಾರದಲ್ಲಿ ಕಳ್ಳತನಕ್ಕೆ ಆಗಮಿಸಿದ್ದ ವಾಹನದ ಸುಳಿವು ಸಿಕ್ಕಿದ್ದು, ಮತ್ತಷ್ಟು ವಾಹನ ನಿಖರತೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ದೃಶ್ಯಾವಳಿ ಕಳುಹಿಸಲಾಗಿದೆ ಎನ್ನಲಾಗಿದೆ.

ಕಳವು ನಡೆದ ಬಳಿಕ ಕಿಟಕಿಯನ್ನು ಸಂಪೂರ್ಣ ಬಂದ್ ಮಾಡಲಾಗುತ್ತಿದ್ದು, ಹಳೆ ಕಪಾಟುಗಳನ್ನು ಹೊರ ಹಾಕಿ ನವೀಕರಿಸಲಾಗುತ್ತಿದೆ. ಈ ಮೂಲಕ ಬ್ಯಾಂಕ್‌ನಲ್ಲಿ ಹೆಚ್ಚಿನ ಸುರಕ್ಷತಾ ಕ್ರಮ ಅಳವಡಿಸಲಾಗಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top