ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ | ಮೋದೀಜಿಯವರಿಗೆ ವೈಜ್ಞಾನಿಕ ಮಾದರಿಯನ್ನು ವಿವರಿಸಿದ ಅಚಲ್ ಬಿಳಿನೆಲೆ

ಜ. 29ರಂದು ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡದ ಮುಡಿಪು ಜವಾಹರ್ ನವೋದಯ ವಿದ್ಯಾಲಯದ ವಿದ್ಯಾರ್ಥಿಗಳು ತಯಾರಿಸಿದ ವೈಜ್ಞಾನಿಕ ಮಾದರಿ ಚಂದ್ರಯಾನ -3 ಯನ್ನು ದೇಶದ ಪ್ರಧಾನಿ ಮೋದೀಜಿಯವರಿಗೆ ವಿದ್ಯಾಲಯದ ಪ್ರಥಮ ಪಿಯುಸಿ ವಿದ್ಯಾರ್ಥಿ ಸುಳ್ಯದ ಅಚಲ್ ಬಿಳಿನೆಲೆಯವರು ವಿವರಿಸಿದರು.

ವೈಜ್ಞಾನಿಕ ಮಾದರಿಯನ್ನು ವೀಕ್ಷಿಸುತ್ತಾ ಬಂದ ಪ್ರಧಾನಿಗಳಿಗೆ “ಪ್ರಣಾಮ್ ಮಹೋದಯ್ , ಮೇ ಅಚಲ್ ಬಿಳಿನೆಲೆ (ನಮಸ್ತೆ ಮಹೋದಯ, ನಾನು ಅಚಲ್ ಬಿಳಿನೆಲೆ) ಎಂದು ಕಲಿಯುತ್ತಿರುವ ಸಂಸ್ಥೆಯ ಬಗ್ಗೆ ಹೇಳಿ ತನ್ನನ್ನು ಪರಿಚಯಿಸಿಕೊಂಡರು.

ಅವರು ಆರಂಭದಲ್ಲಿ “ಚಂದ್ರಯಾನ್ ಕೋ ಯಂಹೀ ಉತಾರ್ ವ  ರಹೇ ಹೋ ಕ್ಯಾ?” (ಚಂದ್ರಯಾನವನ್ನು ಇಲ್ಲೆೇ ಇಳಿಸುತ್ತಿದ್ದೀರಾ?) ಎಂದು ಪ್ರೀತಿಯಿಂದ ನಗುತ್ತಾ ಮಾತನಾಡಿಸಿದ್ದನ್ನು ಕಾರ್ಯಕ್ರಮದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಅಚಲ್ ಬಿಳಿನೆಲೆ ನೆನಪಿಸಿಕೊಳ್ಳುತ್ತಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top