ಪುತ್ತೂರು: ಬ್ರಹ್ಮರಕೋಡಿ ಕುಟುಂಬದ ತರವಾಡು ಮನೆಯ ಧರ್ಮದೈವ ಮತ್ತು ಪರಿವಾರ ದೈವಗಳ ಪುನಃ ಪ್ರತಿಷ್ಠೆ ಫೆ.20 ಹಾಗೂ 21 ರಂದು ಮತ್ತು ನೇಮೋತ್ಸವ ಫೆ.27 ಹಾಗೂ 28 ರಂದು ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿ ಹಾಗೂ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಫೆ.20 ರಂದು ಸಂಜೆ 4 ಕ್ಕೆ ತಂತ್ರಿಗಳ ಆಗಮನ, ಸಂಜೆ 6 ರಿಂದ ಪುಣ್ಯಾಹವಾಚನ, ಸ್ಥಳಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತು ಪುಣ್ಯಹಾಂತ ನಡೆಯಲಿದೆ.
ಫೆ.21 ರಂದು ಬೆಳಿಗ್ಗೆ 7 ರಿಂದ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ನಡೆದು ಬಳಿಕ ಅನ್ನಸಂತರ್ಪಣೆ ಜರಗಲಿದೆ.
ಫೆ.27 ರಂದು ಬೆಳಿಗ್ಗೆ 8.30 ಕ್ಕೆ ಶ್ರೀ ವೆಂಕಟರಮಣ ದೇವರ ಹರಿಸೇವೆ, ಸಂಜೆ 6.30 ಕ್ಕೆ ಭಂಡಾರ ತೆಗೆದು ನೇಮೋತ್ಸವ, ಗುರು ಕಾರ್ನವರು ಮತ್ತು ಸತ್ಯದೇವತೆಗೆ ನೇಮೋತ್ಸವ, ರಾತ್ರಿ 9 ಕ್ಕೆ ಅನ್ನಸಂತರ್ಪಣೆ ನಡೆದು ಬಳಿಕ ಕಲ್ಲುರ್ಟಿ, ವರ್ಣರ ಪಂಜುರ್ಲಿ, ಪಿಲಿಚಾಮುಂಡಿ ದೈವಗಳ ನೇಮೋತ್ಸವ, ಫೆ.28 ರಂದು ಬೆಳಿಗ್ಗೆ 8.30 ಕ್ಕೆ ಧರ್ಮದೈವ ರುದ್ರಚಾಮುಂಡಿ ಮತ್ತು ಗುಳಿಗ ದೈವಗಳ ನೇಮೋತ್ಸವ, ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ಜರಗಲಿದೆ ಎಂದು ಬ್ರಹ್ಮರಕೋಡಿ ಕುಟುಂಬದ ಹಿರಿಯರಾದ ಬಾಬು ಗೌಡ, ಬ್ರಹ್ಮರಕೋಡಿ ತರವಾಡು ಮನೆಯ ದೇವಪ್ಪ ಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.