ಕೆದಿಲ ಉಳ್ಳಾಕುಲು ದೈವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 2 ಲಕ್ಷ ಮಂಜೂರು

ಕೆದಿಲ: ಜೀರ್ಣೋದ್ಧಾರಗೊಳ್ಳುತ್ತಿರುವ ಕೆದಿಲ ಉಳ್ಳಾಕುಲು, ಧೂಮವತಿ, ಮಲರಾಯ, ಪರಿವಾರ ದೈವಗಳ ಬ್ರಹ್ಮಕಲಶೋತ್ಸವಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಎರಡು ಲಕ್ಷ ರೂ.ವನ್ನು ಮಂಜೂರು ಮಾಡಿದ್ದಾರೆ.

ಮಂಜೂರು ಮಾಡಿದ ಎರಡು ಲಕ್ಷ ರೂಪಾಯಿಯ ಮಂಜೂರಾತಿ ಪತ್ರವನ್ನು ಗುರುವಾರ ವಿಟ್ಲ ತಾಲೂಕು ಯೋಜನಾಧಿಕಾರಿ ಚೆನ್ನಪ್ಪ ರವರು ದೈವಸ್ಥಾನದ ಅಧ್ಯಕ್ಷ ಜೈ ಕೃಷ್ಣ ಭಟ್ ಮೀರಾವನ  ಮತ್ತು ಕಮಿಟಿಯ ಸದಸ್ಯರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಪೆರ್ನೆ ವಲಯ ಮೇಲ್ವಿಚಾರಕಿ ಶಾರದಾ, ಸೇವಾ ಪ್ರತಿನಿಧಿ ಜಯಂತಿ, ಜನಜಾಗೃತಿ ವೇದಿಕೆ ಅಧ್ಯಕ್ಷ ಪುಷ್ಪರಾಜ್ ಹೆಗ್ಡೆ ಸತ್ತಿಕ್ಕಲ್ಲು, ಎ ಬಿ  ಒಕ್ಕೂಟದ ಅಧ್ಯಕ್ಷ, ಉಪಾಧ್ಯಕ್ಷರು, ಪೆರ್ನೆ ಕೆದಿಲ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಉಪಸ್ಥಿತರಿದ್ದರು.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top