ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿಯರಿಗೆ “ದಿವ್ಯಾಸ್ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿ”

ಪುತ್ತೂರು: ಮಂಗಳೂರು ನಗರದ ಸ್ಕೂಲ್ ಆಫ್ ಸೋಶಿಯಲ್ ವರ್ಕ್ಸ್ ರೋಶನಿ ನಿಲಯದಲ್ಲಿ ನಡೆದ ಇಂಟಿಗ್ರಲ್  ಯೋಗ ಸತ್ಸಂಗ 2023-24 ನೇ ಸಾಲಿನ “ದಿವ್ಯಾಸ್  ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿ”  ಯನ್ನು ಪುತ್ತೂರು ವಿವೇಕಾನಂದ (ಸ್ವಾಯತ್ತ) ಕಾಲೇಜಿನ ವಿದ್ಯಾರ್ಥಿನಿಯರಾದ ಪ್ರಜ್ಞಾ ಡಿ.  ಹಾಗೂ  ಐದನೇ ಸುತ್ತಿನ ಸೇವಾ ಪ್ರಾಜೆಕ್ಟ್ ನಲ್ಲಿ ನಗದು ಹಾಗೂ ವೈಯಕ್ತಿಕ ಟ್ರೋಫಿಯನ್ನು ಒಳಗೊಂಡ    ಎರಡನೆಯ ಬಹುಮಾನವನ್ನು ತೃತೀಯ ಬಿ ಎ ವಿದ್ಯಾರ್ಥಿನಿ ದೀಪ್ತಿ ಅಡ್ಡಂತ್ತಡ್ಕ ಪಡೆದುಕೊಂಡಿದ್ದಾರೆ.

ಪ್ರಶಸ್ತಿಯು ರೋಲಿಂಗ್ ಶೀಲ್ಡ್, ನಗದು ಹಾಗೂ ವೈಯಕ್ತಿಕ ಟ್ರೋಫಿ ಒಳಗೊಂಡಿದೆ. ಮಂಗಳೂರಿನ ಇಂಟಿಗ್ರೆಲ್ ಯೋಗ ಸತ್ಸಂಗ ಈ ಸ್ಪರ್ಧೆಯನ್ನು ಹಲವಾರು ವರ್ಷಗಳಿಂದ ಜಿಲ್ಲೆಯ  ಅಂತಿಮ ಪದವಿ ವಿದ್ಯಾರ್ಥಿಗಳಿಗೆ ನಡೆಸಿ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ.

ಮಂಗಳೂರಿನ ರೋಶನಿ ನಿಲಯ ಕಾಲೇಜಿನಲ್ಲಿ ಕಳೆದ ಆರು ತಿಂಗಳಿಂದ ಆರು ಸುತ್ತಿನಲ್ಲಿ ಸ್ಪರ್ಧೆ ನಡೆದಿತ್ತು. ಅಂತಿಮ ಸುತ್ತಿಗೆ  ಹಿಂದಿನ ಐದು ಸುತ್ತುಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹತ್ತು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಈ ಪೈಕಿ ಪುತ್ತೂರಿನ ವಿವೇಕಾನಂದ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳಾದ ಪ್ರಜ್ಞಾ ಡಿ ನಾಲ್ಕನೇ ಸುತ್ತಿನ ಲರ್ನ್ ಅಂಡ್ ಟೆಕ್ ನಲ್ಲಿ ಪ್ರಥಮ ಸ್ಥಾನ ಹಾಗೂ ಐದನೇ ಸುತ್ತಿನ ಸೇವಾ ಪ್ರಾಜೆಕ್ಟ್ ನಲ್ಲಿ ಪ್ರಜ್ಞಾ. ಡಿ  ಪ್ರಥಮ ಸ್ಥಾನ ಮತ್ತು  ದೀಪ್ತಿ  ಅಡ್ಡಂತ್ತಡ್ಕ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top