ಕೆದಂಬಾಡಿ: ಕೆದಂಬಾಡಿ ಗ್ರಾಮ ಪಂಚಾಯತ್ ನ ಆಸರೆ ಸಂಜೀವಿನಿ ಒಕ್ಕೂಟ, ಕೆದಂಬಾಡಿ ನಂದಿನಿ ರೈತ ಮಹಿಳಾ ಉತ್ಪಾದಕರ ಸಂಘದ ಹಾಳೆ ತಟ್ಟೆ ಘಟಕ ಉದ್ಘಾಟನಾ ಕಾರ್ಯಕ್ರಮ ನಂದಿನಿ ರೈತ ಮಹಿಳಾ ಉತ್ಪಾದಕರ ಸಂಘದ ಸದಸ್ಯೆ ಕವಿತಾ ಐತಪ್ಪ ಪೂಜಾರಿ ಇದ್ಯಾಪೆ ಕೆದಂಬಾಡಿ ಮನೆಯಲ್ಲಿ ನಡೆಯಿತು.

ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷೆ ಚಂದ್ರಾವತಿ ಕಾರ್ಯಕ್ರಮ ಉದ್ಘಾಟಿಸಿ ಉತ್ಪಾದಕರ ಸಂಘಕ್ಕೆ ಶುಭ ಹಾರೈಸಿದರು. ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಜಗತ್ ಕೆ – ಎನ್.ಆರ್.ಎಲ್.ಎಂ ಯೋಜನೆಯ ಬಗ್ಗೆ, ರೈತ ಉತ್ಪಾದಕರ ಸಂಘದ ಕಾರ್ಯವೈಖರಿ ಬಗ್ಗೆ ಪ್ರಾಸ್ತಾವಿಕವಾಗಿ ಮಾತಾನಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತಾ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಯಲಕ್ಷ್ಮಿ, ವಲಯ ಮೇಲ್ವಿಚಾರಕಿ ನಮಿತಾ, ಒಕ್ಕೂಟದ ಸಿಬ್ಬಂದಿಗಳಾದ ಲೀಲಾ, ಪೂರ್ಣಿಮಾ, ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿ ಗಿರಿಜಾ, ಕೃಷಿ ಉದ್ಯೋಗ ಸಖಿ ಪುಷ್ಪಾವತಿ, ಪಶು ಸಖಿ ವಸಂತಿ ಹಾಗೂ ನಂದಿನಿ ರೈತ ಉತ್ಪಾದಕರ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಐತಪ್ಪ ಪೂಜಾರಿ ಸ್ವಾಗತಿಸಿ, ವಂದಿಸಿದರು.