ಪುತ್ತೂರು: ಕರ್ನಾಟಕ ರಾಜ್ಯ ಗೃಹರಕ್ಷಕ ದಳ ಮತ್ತು ಬೆಂಗಳೂರು ಪೌರ ರಕ್ಷಣಾ ಅಕಾಡೆಮಿ ವತಿಯಿಂದ ಬೆಂಗಳೂರಿನಲ್ಲಿ ನಡೆದ ಲಘು ಮತ್ತು ಪ್ರವಾಹ ರಕ್ಷಣಾ ವಾರ್ಷಿಕ ತರಬೇತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಘಟಕದ ಕೇಶವ ಎಸ್. ಚಿನ್ನದ ಪದಕ ಪಡೆದಿದ್ದಾರೆ.
ಕೇಶವ ಅವರು ಪುತ್ತೂರು ನಗರ ಸಂಚಾರ, ಪುತ್ತೂರು ಗ್ರಾಮಾಂತರ, ಕಡಬ, ಉಪ್ಪಿನಂಗಡಿ ಠಾಣೆಗಳಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಪುತ್ತೂರು ಸಂಚಾರ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಪೊಲೀಸು ಉಪ ಮಹಾ ನಿರ್ದೇಶಕ ರವಿ ಡಿ. ಚೆನ್ನಣ್ಣನವರ್ ಸ್ವಾಗತಿಸಿದರು.
ಪುತ್ತೂರು ಘಟಕದ ಗೃಹರಕ್ಷಕ ಸಿಬ್ಬಂದಿಯಾದ ಅವರು 2016ನೇ ಇಸವಿಯಲ್ಲಿ ಇಲಾಖೆಗೆ ಸೇರಿ ಸುಮಾರು ಎಂಟು ವರ್ಷಗಳ ಕಾಲ ನಿಷ್ಠಾವಂತ ಸೇವೆ ಸಲ್ಲಿಸಿದ್ದಾರೆ. ಗ್ರಾ.ಪಂ ತಾ. ಪಂ ಜಿ.ಪಂ ವಿಧಾನಸಭೆ ಲೋಕಸಬಾ ಚುನಾವಣೆ ತಮಿಳುನಾಡು ಕೇರಳ ರಾಜ್ಯಗಳ ಚುನಾವಣಾ ಕರ್ತವ್ಯ ನಿರ್ವಹಿಸಿದ್ದಾರೆ.
ಪ್ರಸ್ತುತ ನರಿಮೊಗರು ಕಾಳಿಂಗ ಹೀತ್ಲು ನಿವಾಸಿಯಾಗಿರುವ ಕೇಶವ. ಎಸ್, ಅವರು ತಂದೆ ಶಿವಜ್ಞಾನ, ತಾಯಿ ಚಿತ್ರಕಲಾ, ಅಣ್ಣ ಸತೀಶ ಅವರ ಜೊತೆ ವಾಸ್ತವ್ಯ ಹೊಂದಿದ್ದಾರೆ.