ಪಂಜ : ಕುಂದರ್ ಕುಟುಂಬಸ್ಥರ ನಾಗಬನದ ನಾಗಾಪ್ರತಿಷ್ಠೆ ಕಾರ್ಯಕ್ರಮ ಪಂಜದ ಶೆಟ್ಟಿಮೂಲೆ ಎಂಬಲ್ಲಿ ನಡೆಯಿತು.
ಕುಟುಂಬದ ಹಿರಿಯರಾದ ರತ್ನಾಕರ ಸುವರ್ಣ, ಆನಂದ ಪೂಜಾರಿ ಅಡೆಕಲ್ಲು, ಹಾಗೂ 150 ಮಂದಿ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪಂಜದ ಶೆಟ್ಟಿಮೂಲೆಯಲ್ಲಿನ ನಾಗಬನದ ಉಸ್ತುವಾರಿಯನ್ನು ಪ್ರಸ್ತುತ ಮಂಗಳೂರಿನ ಕುಂದರ್ ಕುಟುಂಬಸ್ಥರು ನಡೆಸಿಕೊಂಡು ಬರುತಿದ್ದಾರೆ.
ಮಂಗಳೂರಿನ ಕುಂದರ್ ಕುಟುಂಬಸ್ಥರು ಮೂಲತಃ ಪಂಜದ ಶೆಟ್ಟಿಮೂಲೆಯವರು. ಹಲವು ವರ್ಷಗಳ ಹಿಂದೆ ಕುಂದರ್ ವಂಶಸ್ಥರು ಎರಡು ಕವಲುಗಳಾಗಿ ಒಂದು ಕವಲು ಮಂಗಳೂರಿನತ್ತ ಪಯಣ ಬೆಳೆಸಿತು ಎಂದು ತಿಳಿದು ಬಂದಿರುತ್ತದೆ.
ನಂತರದ ದಿನಗಳಲ್ಲಿ ಕೆಲ ಸಮಸ್ಯೆಗಳು ಉದ್ಭವಗೊಂಡಾಗ ಯಾಕೆ ಈ ರೀತಿ ಎಂದು ತಿಳಿದುಕೊಳ್ಳಲು ಪ್ರಶ್ನಾ ಚಿಂತನೆಯನ್ನು ಇರಿಸಿದಾಗ ನಾಗಬನ ವೊಂದನ್ನು ಹಿಂದಿನ ಬಣವಿದ್ದ ಸ್ಥಳದಲ್ಲಿಯೇ ಮಾಡಬೇಕೆಂದು ಪ್ರಶ್ನಾ ಚಿಂತಕರು ತಿಳಿಸಿದರು. ನಾಗಬನ ಇತ್ತು ಎಂಬುವುದಕ್ಕೆ ಕುರುಹುಗಳು ಪತ್ತೆಯಾಗಿದ್ದು, ಅಲ್ಲಿನ ಅಧ್ಯಕ್ಷ ರವೀಂದ್ರ ಪೂಜಾರಿ ತಿಳಿಸಿದ್ದಾರೆ.
ಕುರುಹುಗಳು ಪತ್ತೆಯಾದ ಬಳಿಕ ಪುನಃ ಪ್ರತಿಷ್ಟಾಪನೆಗೂ 16 ವರ್ಷಗಳ ಹಿಂದೆ ಸ್ಥಳೀಯರಾದ ಬಾಬು ಪೂಜಾರಿ ಕಟ್ಟೆಯನ್ನ ನಿರ್ಮಿಸಿ ಪ್ರತಿಷ್ಠೆ ಮಾಡಿದ್ದರು. ಕಟ್ಟೆಯಲ್ಲಿ ಬಿರುಕು ಕಂಡಾಗ ಅದೇ ಸ್ಥಳದಲ್ಲಿ ಹೊಸ ಕಟ್ಟೆಯೊಂದನ್ನು ನಿರ್ಮಿಸಿ ಇದೀಗ ಪುನಃ ಪ್ರತಿಷ್ಟಾ ಕಾರ್ಯಕ್ರಮ ನಡೆಸಲಾಗಿದೆ.