ಕೆಲಿಂಜ: ಕೆಲಿಂಜ ಶ್ರೀ ಉಳ್ಳಾಲ್ತಿ ಅಮ್ಮನವರ ಹಾಗೂ ಪರಿವಾರ ದೈವಗಳ ಕಾಲಾವಧಿ ಮೆಚ್ಚಿ ಜಾತ್ರೆ ಫೆ. 14 ಬುಧವಾರ ರಾತ್ರಿ ನಡೆಯಲಿದೆ.
ಜಾತ್ರೆಯ ಪ್ರಯುಕ್ತ ಫೆ.13 ಮಂಗಳವಾರ ರಾತ್ರಿ ಶ್ರೀ ಉಳ್ಳಾಲ್ತಿ ಮಲರಾಯ ಮೂಲ ಭಂಡಾರ ಚಾವಡಿ ಬೆಂಞಣ್ತಿಮಾರ್ ಗುತ್ತಿನಿಂದ ಕೆಲಿಂಜ ಶ್ರೀ ಅಮ್ಮನವರ ಸನ್ನಿಧಾನಕ್ಕೆ ಭಂಡಾರ ಆಗಮನವಾಗಲಿದೆ. ಬೆಳಿಗ್ಗೆ 8 ಗಂಟೆಗೆ ತಂತ್ರಿವರ್ಯರ ಆಗಮನ, 9ಕ್ಕೆ ಪ್ರಾರ್ಥನೆ, ಬಿಂಬ ಶುದ್ಧಿ ನಡೆದು ಬಳಿಕ ಬೆಳಿಗ್ಗೆ 10ಕ್ಕೆ ಬಂಟ್ವಾಳ ಬಡ್ಡಕಟ್ಟೆ ಶ್ರೀ ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. 11ಕ್ಕೆ ಶ್ರೀ ದೇವಿ ಭಕ್ತ ವೃಂದ ನಡುವಳಚ್ಚಿಲು ಅವರಿಂದ ಭಜನಾ ಸೇವೆ ನಡೆಯಲಿದೆ.
ಮಧ್ಯಾಹ್ನ 12.30ಕ್ಕೆ ಶ್ರೀ ಉಳ್ಳಾಲ್ತಿ ಅಮ್ಮನವರಿಗೆ ಮತ್ತು ಪರಿವಾರ ದೈವಗಳಿಗೆ ತಂಬಿಲಸೇವೆ, ಹೂವಿನ ಪೂಜೆ, ಕುಂಕುಮಾರ್ಚನೆ, ಕರ್ಪೂರಾರತಿ, ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ಜರಗಲಿದೆ. ಸಂಜೆ 5.30 ರಿಂದ ಶ್ರೀ ಶಂಕರ್ ಮಾಸ್ಟರ್ ಬೋಳಂತೂರು ಮತ್ತು ಬಳಗದವರಿಂದ ಭಜನಾ ಕಾರ್ಯಕ್ರಮ, 6.30 ರಿಂದ : ಬರಿಮಾರು ಶ್ರೀ ಕಾನಲ್ತಾಯ ಮಹಾಕಾಳಿ ಭಜನಾ ಮಂಡಳಿ, ರಾತ್ರಿ 7.30 ರಿಂದ ಒಡಿಯೂರು ರವಿರಾಜ್ ಶೆಟ್ಟಿ ಅವರಿಂದ ಭಜನ್ ಸಂಧ್ಯಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8.30ಕ್ಕೆ ದೈವದ ಪ್ರಸಾದ ರೂಪವಾಗಿ ಚಾವಡಿಯ ವತಿಯಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8:45 ರಿಂದ ಕರಾವಳಿಯ ಪ್ರಸಿದ್ದ ಹಿಮ್ಮೇಳ, ಮುಮ್ಮೇಳ ಕಲಾವಿದರ ಕೂಡುವಿಕೆಯಿಂದ ಪ್ರಖ್ಯಾತ್ ಶೆಟ್ಟಿ ಅಳಿಕೆ ಅವರ ಭಾಗವತಿಕೆಯಲ್ಲಿ “ಕಾರ್ಣಿಕದ ಕಲ್ಲುರ್ಟಿ ಕಲ್ಕುಡೆರು” ತುಳು ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಬಳಿಕ ಕೆಲಿಂಜ ಶ್ರೀ ಕೆಲಿಂಜೇಶ್ವರಿ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಬಳಿಕ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ. ಬಳಿಕ ಕೆಲಿಂಜ ಶ್ರೀ ಉಳ್ಳಾಲ್ತಿ ಅಮ್ಮನವರ ಸನ್ನಿಧಿಗೆ ಭಂಡಾರ ಹೊರಡಲಿದೆ ಎಂದು ಶ್ರೀ ದೈವಸ್ಥಾನದ ಪ್ರಕಟಣೆ ತಿಳಿಸಿದೆ.