ಪುತ್ತೂರು: ಬೈಲಾಡಿ ಶ್ರೀ ಶಾಸ್ತಾವು ದೇವಸ್ಥಾನದ ವರ್ಷಾವಧಿ ಉತ್ಸವ ಹಾಗೂ ಕುಟುಂಬದ ಧರ್ಮ ದೈವಗಳ ವಾರ್ಷಿಕ ತಂಬಿಲ ಫೆ.13 ಮಂಗಳವಾರ ಶ್ರೀ ದೇವಸ್ಥಾನದಲ್ಲಿ ನಡೆಯಲಿದೆ.
ಉತ್ಸವದ ಅಂಗವಾಗಿ ಫೆ.7 ರಂದು ಬೆಳಿಗ್ಗೆ 8 ಕ್ಕೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ ಹಾಗೂ ಬ್ರಹ್ಮಶ್ರೀ ದಿನೇಶ್ ಮರಡಿತ್ತಾಯ ಗುಮ್ಮಟಗದ್ದೆ ಅವರ ನೇತೃತ್ವದಲ್ಲಿ ಗೊನೆ ಕಡಿಯುವುದು.
ಫೆ.13 ರಂದು ಬೆಳಿಗ್ಗೆ 9 ಕ್ಕೆ ಬೈಲಾಡಿ ಮನೆಯಲ್ಲಿ ಶ್ರೀ ವೆಂಕಟರಮಣ ದೇವರ ಮುಡಿಪು ಪೂಜೆ, ಬೆಳಿಗ್ಗೆ 8 ಕ್ಕೆ ದೇವಸ್ಥಾನದಲ್ಲಿ ದೇವತಾ ಪ್ರಾರ್ಥನೆ, ಗಣಪತಿ ಹವನ, ಕಲಶ ಪೂಜೆ, ಕಲಶಾಭಿಷೇಕ, ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ಶಾಸ್ತಾವು ದೇವರ ಮಹಾಪೂಜೆ, ಗುರು ಪೂಜೆ, ಉಳ್ಳಾಕುಲು ಮತ್ತು ಗುಳಿಗ ದೈವಗಳ ತಂಬಿಲ, ಪ್ರಸಾದ ವಿತರಣೆ ನಡೆಯಲಿದೆ.
ಬೆಳಿಗ್ಗೆ 10 ರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ 1ರಿಂದ ಅನ್ನ ಸಂತರ್ಪಣೆ ಜರಗಲಿದೆ. ಸಂಜೆ 5.30 ಕ್ಕೆ ಬೈಲಾಡಿ ಮನೆಯಲ್ಲಿ ಕುಟುಂಬದ ಧರ್ಮ ದೈವಗಳ ತಂಬಿಲ ನಡೆಯಲಿದೆ ಎಂದು ರಾಮಣ್ಣ ಗೌಡ ಪಲ್ಲತ್ತಡ್ಕ ಮತ್ತು ಬೈಲಾಡಿ ಕುಟುಂಬಸ್ಥರು ತಿಳಿಸಿದ್ದಾರೆ.