ಬಂಟ್ವಾಳ: ವ್ಯಕ್ತಿಯೋರ್ವರಿಗೆ ವಿಷ ಜಂತು ಕಡಿದು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ನಗ್ರಿಯಲ್ಲಿ ನಡೆದಿದೆ.
ನಗ್ರಿ ನಿವಾಸಿ ಅಂದ್ರು ಡಿ’ಸೋಜಾ (60) ಮೃತಪಟ್ಟವರು.
ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಂದ್ರು ಡಿ’ಸೋಜಾ ಅವರಿಗೆ ವಿಷ ಜಂತು ಕಡಿದಿದೆ. ತಕ್ಷಣ ಹಳ್ಳಿ ಔಷಧಿ ಮಾಡಲಾಗಿತ್ತು. ಗಾಯ ಉಲ್ಷಣವಾಗಿತ್ತು. ಗುಣಮುಖ ಕಾಣದೇ ಇದ್ದಾಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆನ್ನಲಾಗಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.