ಪುತ್ತೂರು: ಪುತ್ತೂರು ನಗರಸಭೆ ಮತ್ತು ತಾಲೂಕು ಅಡಳಿತದ ವತಿಯಿಂದ ‘ಸಂವಿಧಾನ ಜಾಗೃತಿ ಜಾಥಾ’ ಪ್ರಯುಕ್ತ ಬೈಕ್ ರ್ಯಾಲಿ ಭಾನುವಾರ ಪುತ್ತೂರು ನಗರದಾದ್ಯಂತ ಸಂಚರಿಸಿತು.
ದರ್ಬೆ ಜಂಕ್ಷನ್‌ನಿಂದ ಎನ್‌ಎಸ್ ಕಿಲ್ಲೆ ಮೈದಾನದ ವರೆಗೆ ದ್ಚಿಚಕ್ರ ವಾಹನಗಳಲ್ಲಿ ಜಾಥಾ ನಡೆಸಲಾಯಿತು.

ತಹಸೀಲ್ದಾರ್ ಪುರಂದರ ಹೆಗ್ಡೆ ಬೈಕ್ ರ್ಯಾಲಿಗೆ ಚಾಲನೆ ನೀಡಿ ರಾಜ್ಯಾದ್ಯಂತ ಸಂವಿಧಾನ ಜಾಗೃತಿ ಯನ್ನು ಯಾಕೆ ಮೂಡಿಸಬೇಕು ಎಂಬುದನ್ನ ವಿವರಿಸಿ, ಸಂವಿಧಾನದ ಮಹತ್ವವನ್ನು ತಿಳಿಸಿದರು. ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್, ವರ್ತಕ ಸಂಘದ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು, ನಗರಸಭೆ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.