ಗೋವು ಮನುಷ್ಯನ ಜೀವನದ ಅವಿಭಾಜ್ಯ ಅಂಗ | ಗೋಲೋಕೋತ್ಸವದಲ್ಲಿ ಹರೀಶ್ ರಾವ್

ಪುತ್ತೂರು: ಗೋವು ನಮ್ಮ ಜೀವನದ ಅವಿಭಾಜ್ಯ ಅಂಗ. ದುರಾದೃಷ್ಟವಶಾತ್ ಇಂದಿನ ಜನಾಂಗ ಅದನ್ನು ಮರೆಯುತ್ತಿದ್ದು, ಮುಂದಿನ ಪೀಳಿಗೆಗೆ ಗೋವಿನ ಮಹತ್ವದ ಕುರಿತು ತಿಳಿಹೇಳಬೇಕಾದ ಅಗತ್ಯವಿದೆ ಎಂದು ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ರಾವ್ ಹೇಳಿದರು.

ಅವರು ಭಾನುವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ, ಶ್ರೀ ಮಹಾಲಿಂಗೇಶ್ವರ ಗೋಸೇವಾ ಬಳಗದ ನೇತೃತ್ವದಲ್ಲಿ ಮೊಟ್ಟೆತ್ತಡ್ಕ ಎನ್‍.ಆರ್‍..ಸಿ.ಸಿ. ಸಮೀಪದ ಸಂಪ್ಯದಮೂಲೆಯಲ್ಲಿರುವ ಗೋವಿಹಾರ ಧಾಮದಲ್ಲಿ ಎರಡು ದಿನಗಳ ಕಾಲ ನಡೆದ ಗೋಲೋಕೋತ್ಸವ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾದ ಗೋವು-ನಾವು ವಿಚಾರ ಸಂಕಿರಣ ಹಾಗೂ ಧಾರ್ಮಿಕ ಶಿಕ್ಷಣದ ಮಕ್ಕಳ ಹಾಗೂ ವಿದ್ಯಾರ್ಥಿಗಳ ಸಮಾವೇಶದಲ್ಲಿ ದೇವಸ್ಥಾನದ ಗೋಶಾಲೆ ಕುರಿತು ವಿಚಾರ ಮಂಡನೆ ಮಾಡಿದರು.

ಪ್ರಸ್ತುತ ದೇವಸ್ಥಾನ ಸಹಿತ ವಿವಿಧೆಡೆ ಗೋಶಾಲೆ ಅಭಿವೃದ್ಧಿಗೊಳ್ಳುತ್ತಿದ್ದು, ಅಭಿವೃದ್ಧಿಯ ಜತೆ ಸರಕಾರ ಕೈಜೋಡಿಸಬೇಕಾದ ಅಗತ್ಯವಿದೆ. ಹಾಗಾದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಗೋವುಗಳನ್ನು ಸಾಕಬಹುದು. ಜತೆಗೆ ಕೃಷಿ ಕ್ಷೇತ್ರವನ್ನು ಗೋವುಗಳ ಸಾಕಣೆಯಿಂದ ಸಂಪದ್ಭರಿತವನ್ನಾಗಿ ಮಾಡಬಹುದು ಎಂದು ಹೇಳಿದರು.































 
 

ದೀಪ ಪ್ರಜ್ವಲನೆ ಮಾಡಿದ ಗೋಫಲ ಟ್ರಸ್ಟ್ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಮಾತನಾಡಿ, ವಿಜ್ಞಾನದ ಪ್ರಕಾರ ಎಲ್ಲಿ ಗೋವು ಇರುತ್ತದೋ ಅಲ್ಲಿ ಆಮ್ಲಜನಕ ಜಾಸ್ತಿ ಇರುತ್ತದೆ. ಪುರಾಣಗಳಲ್ಲಿ ಗೋವಿನ ಕುರಿತು ಹಲವಾರು ಮಹತ್ದ ಕುರಿತು ಉಲ್ಲೇಖವಾಗಿದೆ. ದ.ಕ.ಜಿಲ್ಲೆಯಲ್ಲಿ  ಹಲವು ವರ್ಷಗಳು ಕ್ಷೀರಕ್ರಾಂತಿಯ ಚಳುವಳಿಯಿಂದಾಗಿ ಗೋವುಗಳನ್ನು ಸಾಕಲಾಗುತ್ತಿದೆ. ದೇಸೀ ಗೋವಿನ ಹಾಲು ಆರೋಗ್ಯಕರವಾಗಿದ್ದು, ಒಂದು ಮನೆಯಲ್ಲಿ ಒಂದು ಗೋವು ಸಾಕಲು ಸಾಧ್ಬವಿಲ್ಲವೇ ಎಂದು ಪ್ರಶ್ನಿಸಿದ ಅವರು, ವೈದ್ಯಕೀಯವಾಗಿ ಆರೋಗ್ಯವನ್ನು ಉದ್ದೀಪನಗೊಳಿಸುವ ಶಕ್ತಿ ದೇಸೀ ಗೋವಿನ ಹಾಲಿಗಿದೆ. ಈ ನಿಟ್ಟಿನಲ್ಲಿ ದೇಸೀ ಗೋವುಗಳ ಸಾಕಣೆ ಬಗ್ಗೆ ನಾವು ಗಂಭೀರವಾಗಿ ಚಿಂತಿಸಬೇಕಾಗಿದೆ, ಗೋವಿನ ಬಗ್ಗೆ ಸಂಶೋಧನೆ ಮಾಡಬೇಕಿದೆ ಎಂದರು.

ಬದಿಯಡ್ಕ ನೆಕ್ಕರೆ ಕಲೆಯ ಸುಬ್ರಹ್ಮಣ್ಯ ಪ್ರಸಾದ್, ಪ್ರಾಂತೀಯ ಗೋಸೇನಾ ಪ್ರಮುಖ ಪ್ರವೀಣ್ ಸರಳಾಯ, ವಿವಿಧ ವಿಷಯಗಳ ಕುರಿತು ವಿಚಾರ ಮಂಡನೆ ಮಾಡಿದರು.

ವೇದಿಕೆಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಸದಸ್ಯರಾದ ಬಿ.ಐತ್ತಪ್ಪ ನಾಯ್ಕ, ಶೇಖರ್ ನಾರಾವಿ, ರವೀಂದ್ರನಾಥ ರೈ ಬಳ್ಳಮಜಲು, ವೀಣಾ ಬಿ.ಕೆ., ಪಶು ವೈದ್ಯಾಧಿಕಾರಿ ಡಾ.ಪ್ರಸನ್ನ ಹೆಬ್ಬಾರ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಎಂ.ಕೆ.ಕೃಷ್ಣಭಟ್, ಮುಳಿಯ ಜ್ಯುವೆಲ್ಲರ್ಸ್‍ನ ಕೃಷ್ಣನಾರಾಯಣ ಮುಳಿಯ ಉಪಸ್ಥಿತರಿದ್ದರು. ಉಪನ್ಯಾಸಕರಾದ ರಾಜೇಶ್ ಬೆಜ್ಜಂಗಳ, ರಶ್ಮಿ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top