ಪುತ್ತೂರು: 67ನೇ ರಾಷ್ಟ್ರಮಟ್ಟದ ಯೋಗಾಸನಾ ಚಾಂಪಿಯನ್ ಶಿಪ್ -2023-24 ಸ್ಪರ್ಧೆಗೆ ಕರ್ನಾಟಕ ತಂಡ ಆಯ್ಕೆಯಾಗಿದ್ದು, ದ.ಕ.ಜಿಲ್ಲೆಯ ಕಡಬ ತಾಲೂಕಿನ ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಶ್ರೀಮಾ ಕೆ.ಎಚ್. ಫೈನಲ್ ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಮಧ್ಯಪ್ರದೇಶದ ಸಂಗತಾನ್ ಕೇಂದ್ರೀಯ ವಿದ್ಯಾಲಯದಲ್ಲಿ ಫೆ.1 ರಿಂದ ಆರಂಭಗೊಂಡಿದ್ದು, 4 ರ ತನಕ ನಡೆಯಲಿರುವ ಸ್ಪರ್ಧೆಯಲ್ಲಿ ದೆಹಲಿ, ಗುಜರಾತ್, ಕರ್ನಾಟಕ, ಮಹಾರಾಷ್ಟ್ರ, ತ್ರಿಪುರಾ, ವೆಸ್ಟ್ ಬೆಂಗಾಲ್ ಆಯ್ಕೆಯಾಗಿದೆ.
ಶ್ರೀಮಾ ಕೆ.ಎಚ್. ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಹುದೇರಿಮನೆ ಕುಶಾಲಪ್ಪ ಗೌಡ ಹಾಗೂ ಸುಜಿತಾ ದಂಪತಿ ಪುತ್ರಿ. ಅವರಿಗೆ ಶಿಕ್ಷಕರಾದ ಶಶಿಕಲಾ ಹಾಗೂ ಸಂತೋಷ್ ಮುಂಡಕಜೆ ತರಬೇತಿ ನೀಡಿದ್ದಾರೆ.