ಪುತ್ತೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜನ ಶಿಕ್ಷಣ ಟ್ರಸ್ಟ್ ಸಹಭಾಗಿತ್ವದಲ್ಲಿ ಪುತ್ತೂರು ತಾಲೂಕು ಕೇಂದ್ರದಲ್ಲಿ ನಡೆಯುತ್ತಿರುವ ಸಾಂತ್ವನ ಕೇಂದ್ರದಲ್ಲಿ ತೆರವಾಗಿರುವ ಸಮಾಜ ಕಾರ್ಯಕರ್ತರ ಹುದ್ದೆಗೆ ಸೇವಾಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಮಾಜ ಕಾರ್ಯ ಅಥವಾ ಮನಃಶಾಸ್ತ್ರದಲ್ಲಿ ಪದವಿ ವಿದ್ಯಾರ್ಹತೆ ಹೊಂದಿದ್ದು, 22 ರಿಂದ 35 ವರ್ಷದೊಳಗಿನ ಕಂಪ್ಯೂಟರ್ ಜ್ಞಾನ ಹೊಂದಿರುವ, ಗೌರವಧನದ ಆಧಾರದಲ್ಲಿ ಕೆಲಸ ಮಾಡಲು ಇಚ್ಛಿಸುವ ಸೇವಾಸಕ್ತ ಹಾಗೂ ಕ್ಷೇತ್ರ ಅನುಭವ ಹೊಂದಿರುವ, ಪುತ್ತೂರು ತಾಲೂಕು ವ್ಯಾಪ್ತಿಯೊಳಗಿನ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಫೆ.10 ರೊಳಗೆ ನಿರ್ದಿಷ್ಟ ಅರ್ಜಿ ನಮೂನೆಯನ್ನು ಸಾಂತ್ವನ ಕೇಂದ್ರದಿಂದ ಪಡೆದು ನಿರ್ದೇಶಕರು, ಜನ ಶಿಕ್ಷಣ ಸಾಂತ್ವನ ಕೇಂದ್ರ, ಸ್ತ್ರೀ ಶಕ್ತಿ ಭವನ, ದರ್ಬೆ, ಪುತ್ತೂರು, Email : santhwanaputtur@gmail.com ಇಲ್ಲಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 08251-231988, 9449642137 ಸಂಪರ್ಕಿಸಬಹುದು ಎಂದು ಜನಶಿಕ್ಷಣ ಟ್ರಸ್ಟ್ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
























