‘ಗುಜರಾತ್ ಪ್ರವಾಸೋದ್ಯಮ ಇಲಾಖೆ’ ಸಹಯೋಗದೊಂದಿಗೆ 69ನೇ ಫಿಲ್ಮ್ಫೇರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಗುಜರಾತ್ನ ಗಾಂಧಿನಗರದ ಮಹಾತ್ಮ ಮಂದಿರ್ ಕನ್ವೆನ್ಷನ್ ಮತ್ತು ಎಕ್ಸಿವಿಷನ್ ಸೆಂಟರ್ನಲ್ಲಿ ಜ.27 ಹಾಗೂ ಜ.28ರಂದು ಅದ್ಧೂರಿಯಾಗಿ ನಡೆದಿದೆ. ಜನವರಿ 27ರಂದು ಬಾಲಿವುಡ್ ಸಿನಿಮಾಗಳ ಹಲವು ತಾಂತ್ರಿಕ ವಿಭಾಗಗಳಿಗೆ ಪ್ರಶಸ್ತಿ ನೀಡಲಾಗಿತ್ತು. ಜ.28ರಂದು ಉಳಿದ ವಿಭಾಗಗಳಿಗೆ ಪ್ರಶಸ್ತಿ ನೀಡಲಾಯಿತು.
12th ಫೇಲ್ ಸಿನಿಮಾʼ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ. ʻಅನಿಮಲ್ʼ ಚಿತ್ರಕ್ಕಾಗಿ ರಣಬೀರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದರೆ,ʻರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಸಿನಿಮಾಗಾಗಿ ಆಲಿಯಾ ಭಟ್ ಅತ್ಯುತಮ ನಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ʻಥ್ರೀ ಆಫ್ ಅಸ್ʼ ಚಿತ್ರಕ್ಕಾಗಿ ಶೆಫಾಲಿ ಷಾ ಅತ್ಯುತ್ತಮ ವಿಮರ್ಶಕ ನಟಿ ಪ್ರಶಸ್ತಿಯನ್ನು ಪಡೆದರು, ವಿಕ್ರಾಂತ್ ಮಾಸ್ಸೆ ಅವರು ʻ12th ಫೇಲ್ʼ ಸಿನಿಮಾಗಾಗಿ ಅತ್ಯುತ್ತಮ ವಿಮರ್ಶಕ ನಟ ಪ್ರಶಸ್ತಿ ಪಡೆದರು. ʻಡಂಕಿʼ ಚಿತ್ರಕ್ಕಾಗಿ ವಿಕ್ಕಿ ಕೌಶಲ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದರು.
ಅತ್ಯುತ್ತಮ ಚಿತ್ರ
12th ಫೇಲ್ (ವಿನ್ನರ್)
ಜವಾನ್
OMG 2
ಪಠಾಣ್
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ
ಬೆಸ್ಟ್ ಫಿಲ್ಮ್ ಕ್ರಿಟಿಕ್ ಅವಾರ್ಡ್
ಜೋರಾಮ್ (ವಿನ್ನಿಂಗ್)
ಫರಾಜ್
ಸ್ಯಾಮ್ ಬಹದ್ದೂರ್
ಜ್ವಿಗಾಟೊ
ಅತ್ಯುತ್ತಮ ನಿರ್ದೇಶಕ
ವಿಧು ವಿನೋದ್ ಚೋಪ್ರಾ (ವಿನ್ನರ್)- 12th ಫೇಲ್ ಸಿನಿಮಾ
ಅಮೀರ್ ರೈ (OMG 2)
ಅಟ್ಲಿ (ಜವಾನ್)
ಕರಣ್ ಜೋಹರ್ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಸಂದೀಪ್ ರೆಡ್ಡಿ ವಂಗಾ (ಪ್ರಾಣಿ)
ಸಿದ್ಧಾರ್ಥ್ ಆನಂದ್ (ಪಠಾಣ್)
ಅತ್ಯುತ್ತಮ ನಟ
ರಣಬೀರ್ ಕಪೂರ್ – ವಿನ್ನರ್ (ಅನಿಮಲ್ ಸಿನಿಮಾ)
ರಣವೀರ್ ಸಿಂಗ್ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಶಾರುಖ್ ಖಾನ್ (ಡಂಕಿ)
ಶಾರುಖ್ ಖಾನ್ (ಜವಾನ್)
ಸನ್ನಿ ಡಿಯೋಲ್ (ಗದರ್ 2)
ವಿಕ್ಕಿ ಕೌಶಲ್ (ಸ್ಯಾಮ್ ಬಹದ್ದೂರ್)
ವಿಕ್ಕಿ ಕೌಶಲ್ ʻಡಂಕಿʼ ಸಿನಿಮಾಗಾಗಿ ಅತ್ತುತ್ತಮ ಪೋಷಕ ನಟ, ಶಬಾನಾ ಅಜ್ಮಿ ʻರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಸಿನಿಮಾಗಾಗಿ ಅತ್ತುತ್ತಮ ಪೋಷಕ ನಟಿ ಪ್ರಶಸ್ತಿ, ಅಮಿತಾಭ್ ಭಟ್ಟಾಚಾರ್ಯ (ತೇರೆ ವಾಸ್ತೆ- ಜರಾ ಹಟ್ಕೆ ಜರಾ ಬಚ್ಕೆ) ಉತ್ತಮ ಸಾಹಿತ್ಯ ಪ್ರಶಸ್ತಿ ಬಂದಿದೆ. ಅತ್ಯತ್ತಮ ಕಥೆ: ಅಮಿತ್ ರೈ (ಒಎಂಜಿ 2) ಅತ್ಯುತ್ತಮ ನಟಿ (ಕ್ರಿಟಿಕ್ಸ್): ರಾಣಿ ಮುಖರ್ಜಿ (ಮಿಸಸ್ ಚಟರ್ಜಿ Vs ನಾರ್ವೇ)