ಪುತ್ತೂರು: ಮುರ ಸಮೀಪದ ಪೋಳ್ಯದಲ್ಲಿ ನಡೆದ ಅಪಘಾತದಲ್ಲಿ ಶಿಕ್ಷಕಿಯೋರ್ವರು ದಾರುಣವಾಗಿ ಮೃತಪಟ್ಟ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
ಮೃತಪಟ್ಟವರನ್ನು ಅನಿತಾ ಎಂದು ಗುರುತಿಸಿದ್ದು, ನೇರಳಕಟ್ಟೆ ಶಾಲಾ ಶಿಕ್ಷಕಿ ಎಂದು ಹೇಳಲಾಗಿದೆ.
ದ್ವಿಚಕ್ರ ವಾಹನದಲ್ಲಿ ಪತಿ ಹಾಗೂ ತನ್ನ ಮಗುವಿನೊಂದಿಗೆ ಸಂಚರಿಸುತ್ತಿದ್ದ ಅನಿತಾ ಅವರು, ಟಿಪ್ಪರ್ ಅಡಿಗೆ ಬಿದ್ದು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಪತಿ ಸುರೇಶ್ ಕುಲಾಲ್ ಹಾಗೂ ಮಗುವಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಹೇಳಲಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ತರಲಾಗಿದೆ. ಪುತ್ತೂರು ನಗರ ಸಂಚಾರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.