ಪುತ್ತೂರು: ಭಾರತೀಯ ಜನತಾ ಪಾರ್ಟಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮೋದಿ ಮತ್ತೊಮ್ಮೆ ಗೋಡೆ ಬರಹಕ್ಕೆ ಭಾನುವಾರ ಚಾಲನೆ ನೀಡಲಾಯಿತು.

ಪುತ್ತೂರಿನ ಹಲವೆಡೆ ಮೋದಿ ಮತ್ತೊಮ್ಮೆ ಎಂದು ಬರೆದು, ಬಿಜೆಪಿಯ ಕಮಲ ಚಿಹ್ನೆಯನ್ನು ಅಂಟಿಸಲಾಯಿತು.
ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಕೃಷ್ಣ ಆಳ್ವ, ನಗರ ಮಂಡಲ ಅಧ್ಯಕ್ಷ ಪಿ.ಜಿ ಜಗನ್ನೀವಾಸ್ ರಾವ್, ಮಾಜಿ ಶಾಸಕ ಸಂಜೀವ ಮಠಂದೂರು, ಗೋಡೆ ಬರಹ ಜಿಲ್ಲಾ ಸಹ ಸಂಚಾಲಕ ದಯಾನಂದ ಶೆಟ್ಟಿ, ಮಂಡಲದ ಗೋಡೆ ಬರಹ ಪ್ರಮುಖ ಸುರೇಶ್ ಅತ್ರಮಜಲು, ರಾಜೇಶ್ ಕುಂಬ್ರ, ಶಿವಕುಮಾರ್ ಕಲ್ಲಿಮಾರ್, ಸಚಿನ್ ಶೆಣೈ ಪ್ರಮುಖರು ಉಪಸ್ಥಿತರಿದ್ದರು.