ಲೋಕಸಭಾ ಚುನಾವಣೆ: ದಕ್ಷಿಣ ಕನ್ನಡಕ್ಕೆ ಕೋಟ ಶ್ರೀನಿವಾಸ ಪೂಜಾರಿ ಉಸ್ತುವಾರಿ | ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೂ ಉಸ್ತುವಾರಿ ನೇಮಿಸಿದ ಬಿಜೆಪಿ!

ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸಿರುವ ಬಿಜೆಪಿ ಹೈಕಮಾಂಡ್, ಈ ಬಾರಿ ರಾಜ್ಯ ಚುನಾವಣಾ ಉಸ್ತುವಾರಿಯನ್ನು ರಾಧ ಮೋಹನದಾಸ್ ಅಗರವಾಲ್ ಹಾಗೂ ಸುಧಾಕರ್ ರೆಡ್ಡಿ ಅವರಿಗೆ ನೀಡಲಾಗಿದೆ.

ಅಲ್ಲದೇ, ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೂ  ಉಸ್ತುವಾರಿಗಳನ್ನು ನೇಮಕ ಮಾಡಿ ಅಧಿಕೃತ ಪಟ್ಟಿಯನ್ನು ಹೊರಡಿಸಿದೆ.

ದಕ್ಷಿಣ ಕನ್ನಡಕ್ಕೆ ಕೋಟ ಶ್ರೀನಿವಾಸ ಪೂಜಾರಿ, ಮೈಸೂರಿಗೆ ಡಾ. ಸಿ.ಎನ್. ಅಶ್ವತ್ಥ ನಾರಾಯಣ್, ಮಂಡ್ಯಕ್ಕೆ ಸುನಿಲ್ ಸುಬ್ರಮಣಿ ಅವರಿಗೆ ಉಸ್ತುವಾರಿ ವಹಿಸಲಾಗಿದೆ.































 
 

ಇದರ ಜೊತೆಗೆ ಇತರ ಕ್ಷೇತ್ರವಾರು ಉಸ್ತುವಾರಿಗಳ ಪಟ್ಟಿ ಹೀಗಿದೆ. ಮೈಸೂರು: ಡಾ.ಸಿಎನ್ ಅಶ್ವಥ್ ನಾರಾಯಣ್

ಚಾಮರಾಜನಗರ: ಎನ್ವಿ ಫನಿಶ್

ಮಂಡ್ಯ: ಸುನಿಲ್ ಸುಬ್ರಮಣಿ

ಹಾಸನ: ಎಂಕೆ ಪ್ರಾಣೇಶ್

ದಕ್ಷಿಣ ಕನ್ನಡ: ಕೋಟ ಶ್ರೀನಿವಾಸ ಪೂಜಾರಿ

ಉಡುಪಿ-ಚಿಕ್ಕಮಗಳೂರು: ಅರಗ ಜ್ಞಾನೇಂದ್ರ

ಶಿವಮೊಗ್ಗ: ರಘುಪತಿ ಭಟ್

ಉತ್ತರ ಕನ್ನಡ: ಹರತಾಳು ಹಾಲಪ್ಪ

ಧಾರವಾಡ: ಈರಣ್ಣ ಕಡಾಡಿ

ಹಾವೇರಿ: ಅರವಿಂದ್ ಬೆಲ್ಲದ್

ಬೆಳಗಾವಿ: ವೀರಣ್ಣ ಚರಂತಿಮಠ

ಚಿಕ್ಕೋಡಿ: ಅಭಯ್ ಪಾಟೀಲ್

ಬಾಗಲಕೋಟೆ: ಲಿಂಗರಾಜ್ ಪಾಟೀಲ್

ವಿಜಯಪುರ (ಎಸ್ಸಿ): ರಾಜಶೇಖರ್ ಶೀಲವಂತ್

ಬೀದರ್: ಅಮರನಾಥ್ ಪಾಟೀಲ್

ಗುಲ್ಬರ್ಗಾ: ರಾಜು ಗೌಡ

ರಾಯಚೂರು (ಎಸ್ಟಿ): ದೊಡ್ಡನಗೌಡ ಹೆಚ್ ಪಾಟೀಲ್

ಕೊಪ್ಪಳ: ರಘುನಾಥ್ ರಾವ್ ಮಲ್ಕಾಪುರೆ

ಬಳ್ಳಾರಿ (ಎಸ್ಟಿ): ಎನ್ ರವಿಕುಮಾರ್

ದಾವಣಗೆರೆ: ಬೈರತಿ ಬಸವರಾಜ್

ಚಿತ್ರದುರ್ಗ (ಎಸ್ಸಿ): ಚನ್ನಬಸಪ್ಪ

ತುಮಕೂರು: ಕೆ ಗೋಪಾಲಯ್ಯ

ಚಿಕ್ಕಬಳ್ಳಾಪುರ: ಕಟ್ಟಾ ಸುಬ್ರಮಣ್ಯ ನಾಯ್ಡು

ಕೋಲಾರ (ಎಸ್ಸಿ): ಬಿ.ಸುರೇಶ್ ಗೌಡ

ಬೆಂಗಳೂರು ಗ್ರಾಮಾಂತರ: ನಿರ್ಮಲ್ ಕುಮಾರ್ ಸುರನ

ಬೆಂಗಳೂರು ದಕ್ಷಿಣ: ಎಂ ಕೃಷ್ಣಪ್ಪ

ಬೆಂಗಳೂರು ಸೆಂಟ್ರಲ್: ಗುರುರಾಜ್ ಗಂಟಿಹೊಳೆ

ಬೆಂಗಳೂರು ಉತ್ತರ: ಎಸ್ಆರ್ ವಿಶ್ವನಾಥ್

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top