ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆ: ಐ.ಆರ್.ಸಿ.ಎಂ.ಡಿ. ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ 12 ಪ್ರಶಸ್ತಿ

ಪುತ್ತೂರು: ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ  ಅಬಾಕಸ್ ಸ್ಪರ್ಧೆಯಲ್ಲಿ ಪುತ್ತೂರಿನ  ಐ.ಆರ್.ಸಿ.ಎಂ.ಡಿ. ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಪುತ್ತೂರು ಮತ್ತು ಸುಳ್ಯದ ವಿದ್ಯಾರ್ಥಿಗಳು ಒಟ್ಟು ವಿದ್ಯಾರ್ಥಿಗಳು 12 ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ಇವರೆಲ್ಲರೂ ಐ.ಆರ್.ಸಿ.ಎಂ.ಡಿ. ಶಿಕ್ಷಣ ಸಂಸ್ಥೆಯಲ್ಲಿ ತರಬೇತಿ ಪಡೆದುಕೊಂಡಿದ್ದು, ಸಂಸ್ಥೆಯ ಪ್ರಫುಲ್ಲಾ ಗಣೇಶ್ ಅವರು  ತರಬೇತಿ ನೀಡಿದ್ದಾರೆ.

ತುಮಕೂರು ಎಸ್.ಆರ್.ಎಸ್ ಇಂಟರ್ನ್ಯಾಷನಲ್ ಸ್ಕೂಲ್ ಮತ್ತು  ಟಿ.ಆರ್.ಎಸ್ ಶಿಕ್ಷಣ ಸಂಸ್ಥೆಯು ಜ. 21ರಂದು ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಯನ್ನು ಆಯೋಜಿಸಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ 800ಕ್ಕೂ ಅಧಿಕ ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಐ.ಆರ್.ಸಿ.ಎಂ.ಡಿ. ಶಿಕ್ಷಣ ವಿದ್ಯಾರ್ಥಿಗಳು 12 ಬಹುಮಾನಗಳೊಂದಿಗೆ ಮಾನಸಿಕ ಗಣಿತದ ಜಗತ್ತಿನಲ್ಲಿ ತಮ್ಮ ಛಾಪನ್ನು ಮೂಡಿಸಿರುತ್ತಾರೆ.































 
 

ತಿಪಟೂರು ಶ್ರೀ ಷಡಕ್ಷರ ಮಠದ ಡಾ| ಶ್ರೀ ರುದ್ರಮುನಿ ಸ್ವಾಮಿಗಳ ಉಪಸ್ಥಿತಿಯಲ್ಲಿ ಬಹುಮಾನ ನೀಡಿ ಗೌರವಿಸಲಾಯಿತು.

ಪ್ರಶಸ್ತಿಗಳ ವಿವರ:

ತನಯ (ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲೆ), ವಿವಾನ್ (ರೋಟರಿ ನರ್ಸರಿ ಮತ್ತು ಆಂಗ್ಲ ಮಾಧ್ಯಮ ಶಾಲೆ ಸುಳ್ಯ) ಅವರು ಮಾನಸಿಕ ಅಂಕಗಣಿತದ ತನ್ನ ಅಸಾಧಾರಣ ಕೌಶಲ್ಯಗಳನ್ನು ಪ್ರದರ್ಶಿಸುವ ಮೂಲಕ ಚಾಂಪಿಯನ್ ಆಫ್ ಚಾಂಪಿಯನ್ ಟ್ರೋಫಿಯನ್ನು ಪಡೆದುಕೊಂಡಿದ್ದಾರೆ.

ಚಿರಾಗ್ ಎಂ.ಎಲ್ (ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್  ಬೆಳ್ಳಾರೆ) ಅವರು ಅತ್ಯುತ್ತಮ ಗಣಿತ ಕೌಶಲ್ಯಗಳನ್ನು ಪ್ರದರ್ಶಿಸುವ ಮೂಲಕ ಚಾಂಪಿಯನ್ ಟ್ರೋಫಿಯನ್ನು ಪಡೆದುಕೊಂಡಿದ್ದಾರೆ. 

ಕೃಪಾಹರಿ ಎಂ. ರೈ (ವಿದ್ಯಾರಶ್ಮಿ ವಿದ್ಯಾಲಯ ಸವಣೂರು), ಶಾರ್ವರಿ (ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲೆ), ಪ್ರಣತಿ ಬಿ.  (ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ) ಅವರು ಟಾಪರ್ ಟ್ರೋಫಿಯನ್ನು ಪಡೆದುಕೊಂಡಿದ್ದಾರೆ.

ಶೌರ್ಯ ಕಾರ್ತಿಕೇಯ (ವಿವೇಕಾನಂದ ಸೆಂಟ್ರಲ್ ಸ್ಕೂಲ್ ಪುತ್ತೂರು) ಅವರು ವಿನ್ನರ್ ಟ್ರೋಫಿಯನ್ನು ಪಡೆದುಕೊಂಡಿದ್ದಾರೆ.

ಗಾನ್ಯ ಬಿ.ಎಸ್. (ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಸುಳ್ಯ), ಇಚ್ಛಿಕ ಜೈನ್ (ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲೆ), ವಿಹಾನ್  (ಶ್ರೀ ಗಜಾನನ ಪ್ರಾಥಮಿಕ ಶಾಲೆ, ಈಶ್ವರಮಂಗಲ), ಆಶ್ವಿಕೃಷ್ಣ (ಲಿಟ್ಲ್ ಫ್ಲವರ್ ಪ್ರಾಥಮಿಕ ಶಾಲೆ), ಆಹನ್ ಜೈನ್ (ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲೆ) ರನ್ನರ್ ಟ್ರೋಫಿಯನ್ನು ಪಡೆದುಕೊಂಡಿದ್ದಾರೆ.

ಆರ್ಯ (ಸುದಾನ ವಸತಿಯುತ ಶಾಲೆ ಪುತ್ತೂರು), ಶಾರ್ವಿಲ್ (ಸುದಾನ ವಸತಿಯುತ ಶಾಲೆ ಪುತ್ತೂರು), ಶ್ರೇಯಾಂಕ್ (ಶ್ರೀರಾಮ ಪ್ರಾಥಮಿಕ ಶಾಲೆ ಕಲ್ಲಡ್ಕ) ಅವರು ತಮ್ಮ ಗಮನಾರ್ಹ ಪ್ರದರ್ಶನದ ಮೂಲಕ ಅರ್ಹತಾ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top