ದ.ಕ.ಜಿಲ್ಲಾ ಗ್ರಂಥಾಲಯ ನೌಕರರ ಸಂಘದ ಸಭೆ | ಪದಾಧಿಕಾರಿಗಳ ಆಯ್ಕೆ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಗ್ರಂಥಾಲಯ ನೌಕರರ ಸಂಘದ ಸಭೆ ಬಂಟ್ವಾಳ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. 

ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮೋಹನ್ ಹಾಸನ, ರಾಜ್ಯ ಸಂಘದ ಉಪಾಧ್ಯಕ್ಷ ಶಿವರಾಮೇ ಗೌಡ, ರಾಜ್ಯ ಸಂಘದ ಕಾರ್ಯದರ್ಶಿ  ಶ್ರೀರಾಮ, ರಾಜ್ಯ ಸಂಘಟನಾ ಕಾರ್ಯದರ್ಶಿ ಸಾವಿತ್ರಿ ರಾಮ್ ಕಣೆಮರಡ್ಕ ಹಾಗೂ ಜಿಲ್ಲಾ ಸಂಘದ ನಿಕಟಪೂರ್ವ ಅಧ್ಯಕ್ಷ ವಿನ್ಸೆಂಟ್ ಅವರ ಉಪಸ್ಥಿತಿಯಲ್ಲಿ ಕೆಲವೊಂದು ವಿಚಾರ ವಿನಿಮಯ ನಡೆಸಲಾಯಿತು.

ಜಿಲ್ಲಾ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನಡೆಯಿತು. ಜಿಲ್ಲಾ ಸಂಘದ ಗೌರವಾಧ್ಯಕ್ಷರಾಗಿ ವಿನ್ಸೆಂಟ್, ಅಧ್ಯಕ್ಷರಾಗಿ ಸವಣೂರು ಗ್ರಾಪಂ ಅಧ್ಯಕ್ಷೆ ಶಾರದಾ.ಎಂ., ಪ್ರಧಾನ ಕಾರ್ಯದರ್ಶಿಯಾಗಿ ನರಿಮೊಗರು ಗ್ರಾಪಂನ ವರುಣ್ ಕುಮಾರ್ ಎಸ್., ಖಜಾಂಚಿಯಾಗಿ ಗುತ್ತಿಗಾರು ಗ್ರಾಪಂನ ಅಭಿಲಾಷ ಮೋಟ್ನೂರು, ಉಪಾಧ್ಯಕ್ಷರಾಗಿ ಎಕ್ಕಾರು ಗ್ರಾಪಂನ ಹೇಮಲತಾ ಜೆ ಶರ್ಮ, ಕಾರ್ಯದರ್ಶಿಯಾಗಿ ಕೊಣಾಜೆ ಗ್ರಾಪಂನ ಮಾನಸ ಕುಲಾಲ್, ಸಂಘಟನಾ ಕಾರ್ಯದರ್ಶಿಯಾಗಿ ಬೆಳಾಲು ಗ್ರಾಪಂನ ಡೀಕಯ್ಯ ಗೌಡ, ಪುದು ಗ್ರಾಪಂನ ಸೌಮ್ಯ, ಕ್ರೀಡಾ ಸಂಚಾಲಕರಾಗಿ ಉಜಿರೆ ಗ್ರಾಪಂನ ತಾರಾ, ಕೆಮಾಲ್ ಗ್ರಾಪಂನ ಶೈಲಜಾ ಮುಲ್ಕಿ, ಸಾಂಸ್ಕೃತಿಕ ಸಂಚಾಲಕರಾಗಿ ಕಡೇಶ್ವಾಲ್ಯ ಗ್ರಾಪಂನ ಪೂಜಾ ಕೆ., ಸದಸ್ಯರುಗಳಾಗಿ ಮರ್ದಾಳ ಗ್ರಾಪಂನ ನಾಗೇಶ ಕೆ., ದರೆಗುಡ್ಡೆ ಗ್ರಾಪಂನ ಕುಸುಮಾ, ಬೆಟ್ಟಂಪಾಡಿ ಗ್ರಾಪಂನ ಪ್ರೇಮಲತಾ, ಪಾವೂರು ಗ್ರಾಪಂನ ಶ್ವೇತಾ, ತುಂಬೆ ಗ್ರಾಪಂನ  ಅಶ್ವಿನಿ ಹಾಗೂ ಅಮರ ಮುಡ್ನೂರು ಗ್ರಾಪಂನ ಸಂತೋಷ್ ಮುಂಡಕಜೆ  ಆಯ್ಕೆಯಾದರು.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top