ಪುತ್ತೂರು ತಹಸೀಲ್ದಾರ್ ಜಿ.ಶಿವಶಂಕರ್ ವರ್ಗಾವಣೆ!

ಪುತ್ತೂರು: ಇಲ್ಲಿನ ತಹಸೀಲ್ದಾರ್ ಜಿ. ಶಿವಶಂಕರ್ ಅವರು ವರ್ಗಾವಣೆಗೊಂಡಿದ್ದು, ತೆರವಾದ ಪುತ್ತೂರು ತಹಸೀಲ್ದಾರ್ ಹುದ್ದೆಗೆ ಪುರಂದರ ನೇಮಕಗೊಂಡಿದ್ದಾರೆ.

ಪುರಂದರ ಅವರು ಬಾಗಲಕೋಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಪುತ್ತೂರಿಗೆ ವರ್ಗಾವಣೆಗೊಂಡಿದ್ದಾರೆ.

ಪುತ್ತೂರು ತಹಸೀಲ್ದಾರ್ ಗ್ರೇಡ್ 1 ಹುದ್ದೆಯಾಗಿದ್ದು, ವರ್ಗಾವಣೆಗೊಂಡಿರುವ ಜಿ. ಶಿವಶಂಕರ್ ಅವರು ಗ್ರೇಡ್ 2 ತಹಸೀಲ್ದಾರ್ ಆಗಿದ್ದರು. ಜಿ. ಶಿವಶಂಕರ್ ಅವರು ಮುಂದಿನ ಸ್ಥಳ ನಿಯುಕ್ತಿಗಾಗಿ ಸರಕಾರದಲ್ಲಿ ವರದಿ ಮಾಡಿಕೊಳ್ಳುವಂತೆ ಸರಕಾರದ ಅಧೀನ ಕಾರ್ಯದರ್ಶಿ ಮುಕ್ತಾರ್ ಪಾಷ ಹೆಚ್.ಜಿ. ಆದೇಶ ಹೊರಡಿಸಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top