ಪುತ್ತೂರು: ಇಲ್ಲಿನ ಎಸ್.ಆರ್.ಕೆ. ಲ್ಯಾಡರ್ಸಿನ ಬೆಳ್ಳಿಹಬ್ಬ ಸಂಭ್ರಮದ ಅಂಗವಾಗಿ ಸರಣಿಯ 5ನೇ ಕಾರ್ಯಕ್ರಮವಾಗಿ ಬನ್ನೂರು ಹಿ.ಪ್ರಾ. ಶಾಲೆಯಲ್ಲಿ ಶ್ರಮದಾನ ಹಾಗೂ ಶಾಲಾ ಕೊಠಡಿ, ದಾಸ್ತಾನು ಕೊಠಡಿಗಳ ನಿರ್ವಹಣೆ ಮಾಡಲಾಯಿತು.
ಶಾಲಾ ಮೈದಾನದಲ್ಲಿ ಬೆಳೆದಿದ್ದ ಹುಲ್ಲು, ಗಿಡ – ಗಂಟಿಗಳನ್ನು ತೆರವುಗೊಳಿಸಲಾಯಿತು. ಬಳಿಕ ಶಾಲಾ ತರಗತಿ ಕೊಠಡಿ, ದಾಸ್ತಾನು ಕೊಠಡಿಗಳನ್ನು ಬಳಕೆಗೆ ಯೋಗ್ಯವಾದ ರೀತಿಯಲ್ಲಿ ಸಿದ್ಧಪಡಿಸಿ, ಶುಚಿಗೊಳಿಸಿ ನೀಡಲಾಯಿತು. ದಾರಂದಗಳನ್ನು ಜೋಡಿಸಿ, ಬಾಗಿಲುಗಳನ್ನು ಅಳವಡಿಸಿ, ಗೋಡೆಗಳಿಗೆ ಪೈಂಟಿಂಗ್ ಮಾಡಿಸಲಾಯಿತು. ಸರಣಿ ಕಾರ್ಯಕ್ರಮದ ಅಂಗವಾಗಿ ಇಡೀ ದಿನ ಶಾಲಾ ವಠಾರದಲ್ಲಿ ವಿವಿಧ ಕೆಲಸ – ಕಾರ್ಯಗಳನ್ನು ನಡೆಸಿದ್ದು, ಎಸ್.ಆರ್.ಕೆ. ಲ್ಯಾಡರ್ಸಿನ ಸುಮಾರು 50 ಮಂದಿ ಸಿಬ್ಬಂದಿಗಳು ತೊಡಗಿಸಿಕೊಂಡರು.
ಶತಮಾನದ ಅಂಚಿನಲ್ಲಿರುವ ಬನ್ನೂರು ಹಿ.ಪ್ರಾ. ಶಾಲೆ ಹಲವು ಮೂಲಭೂತ ಸೌಕರ್ಯಗಳನ್ನು ಎದುರು ನೋಡುತ್ತಿತ್ತು. ಇದರಲ್ಲಿ ಅಗತ್ಯ ಎನಿಸಿರುವ ಸೌಕರ್ಯಗಳನ್ನು ಎಸ್.ಆರ್.ಕೆ. ಲ್ಯಾಡರ್ಸಿನ ಬೆಳ್ಳಿಹಬ್ಬದ ಸಂಭ್ರಮದ ಪ್ರಯುಕ್ತ ಪೂರೈಸಲಾಯಿತು. ಎಸ್.ಆರ್.ಕೆ. ಲ್ಯಾಡರ್ಸಿನ ಸಿಬ್ಬಂದಿಗಳ ಜೊತೆಗೆ ಶಾಲಾ ಎಸ್.ಡಿ.ಎಂ.ಸಿ., ಪೋಷಕರು, ಶಾಲಾ ಶಿಕ್ಷಕರು ಶ್ರಮದಾನದಲ್ಲಿ ತೊಡಗಿಸಿಕೊಂಡರು.
ಎಸ್.ಡಿ.ಎಂ.ಸಿ. ಅಧ್ಯಕ್ಷ ಗುರುಪ್ರಸಾದ್ ಬನ್ನೂರು, ನಗರಸಭೆ ಸದಸ್ಯೆ ಗೌರಿ ಬನ್ನೂರು, ಮುಖ್ಯಗುರು ಮಹಮ್ಮದ್ ಅಶ್ರಫ್, ಶಿಕ್ಷಕರಾದ ಗ್ರೆಟ್ಟಾ ಮಸ್ಕರೇನಸ್, ಉಸ್ಮಾನ್, ಸುಷ್ಮಾ ಹಾಗೂ ಎಸ್.ಆರ್.ಕೆ. ಲ್ಯಾಡರ್ಸಿನ ಮಾಲಕ ಕೇಶವ ಎ., ಸುವರ್ಣ ಇಂಡಸ್ಟ್ರೀಸ್ ನ ಮಾಲಕ ವಸಂತ ಬನ್ನೂರು, ಶಾಲಾ ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.