ಪುತ್ತೂರು: ಪ್ರತಿಷ್ಠಿತ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ತಾರನಾಥ ಕಾಯರ್ಗ, ಉಪಾಧ್ಯಕ್ಷರಾಗಿ ಚೇತನ್ ಕುಮಾರ್ ಕೋಡಿಬೈಲ್ ಆಯ್ಕೆಯಾಗಿದ್ದಾರೆ.
ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆ ಚುನಾವಣೆ ಜ.13 ರಂದು ನಡೆದಿದ್ದು, ಎಲ್ಲಾ ಸ್ಥಾನ ಸಹಕಾರಿ ಭಾರತಿ ಪಾಲಾಗಿತ್ತು.
ಒಟ್ಟು 12 ಸ್ಥಾನಗಳಿಗೆ 23 ಸ್ಪರ್ಧಿಗಳು ಕಣದಲ್ಲಿದ್ದರು. ಈ ಪೈಕಿ ಒಂದು ಸ್ಥಾನಕ್ಕೆ ಸಾಲಗಾರರ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಪ್ರಕಾಶ್ ರೈ ಸಾರಕರೆ ಅವಿರೋಧ ಆಯ್ಕೆಯಾಗಿದ್ದರು. ಉಳಿದಂತೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಸಾಮಾನ್ಯ ಕ್ಷೇತ್ರದಿಂದ ಅಶ್ವಿನ್ ಎಲ್. ಶೆಟ್ಟಿ, ಗಣೇಶ್ ನಿಡ್ವಣ್ಣಾಯ, ತಾರನಾಥ ಕಾಯರ್ಗ, ಪ್ರವೀಣ್ ಕೆಡೆಂಜಿ, ಶಿವಪ್ರಸಾದ್ ಎಂ.ಎನ್., ಹಿಂದುಳಿದ ವರ್ಗ ಎ ಯಿಂದ ಚೇತನ್ ಕೆ., ಅನುಸೂಚಿತ ಜಾತಿಯಿಂದ ತಿಮ್ಮಪ್ಪ, ಹಿಂದುಳಿದ ವರ್ಗ ಬಿ ಯಿಂದ ಚೆನ್ನಪ್ಪ ಗೌಡ ನೂಜಿ, ಪರಿಶಿಷ್ಟ ಪಂಗಡದಿಂದ ಗಂಗಾಧರ ಪೆರಿಯಡ್ಕ, ಮಹಿಳಾ ಕ್ಷೇತ್ರದಿಂದ ಜ್ಞಾನೇಶ್ವರಿ, ಸೀತಾಲಕ್ಷ್ಮೀ ಗೆಲುವು ಸಾಧಿಸಿದ್ದರು.