ಚಾರ್ವಾಕ: ಅಯೋಧ್ಯ ಶ್ರೀ ರಾಮ ಜನ್ಮ ಭೂಮಿ ಪ್ರಾಣ ಪ್ರತಿಷ್ಠೆ ಅಂಗವಾಗಿ ಚಾರ್ವಕ ನಾಣಿಲ ಉಪವಾಸತಿ ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ರಾಮ ರಕ್ಷಾ ಸ್ತೋತ್ರ ಮಂತ್ರ ಪಠಣ, ನಾಲ್ಕಂಭ ಉಳ್ಳಾಲ್ತಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.
ಅಯೋಧ್ಯೆ ಶ್ರೀರಾಮನ ಪ್ರಾಣ ಪ್ರತಿಷ್ಠೆಯ ಅವಿಸ್ಮರಣೀಯ ನೆನಪಿಗಾಗಿ ಪವಿತ್ರ ಬಿಲ್ವಪತ್ರೆ ಹಾಗೂ ಪಾರಿಜಾತ ಗಿಡ ನೆಡಲಾಯಿತು. ಈ ಸಂದರ್ಭದಲ್ಲಿ ಅಯೋಧ್ಯೆ ಶ್ರೀ ರಾಮನ ಪ್ರಾಣ ಪ್ರತಿಷ್ಠೆಯ ನೇರ ಪ್ರಸಾರವನ್ನು ಭಕ್ತಾದಿಗಳು ವೀಕ್ಷಿಸಿ ಪುನೀತರಾದರು.
ಮಧ್ಯಾಹ್ನ 12:30 ರಿಂದ ಜೈ ಶ್ರೀ ರಾಮ್ ಬರಹ, ಭಕ್ತಿ ಗೀತೆ ಸ್ಪರ್ಧೆ ನಡೆಸಲಾಯಿತು.
ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಶ್ರೀ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರವನ್ನು ದೇವಸ್ಥಾನ ವ್ಯವಸ್ಥಾಪನೆ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ನೀಡಿದರು. ಬಳಿಕ ಅನ್ನ ಸಂತರ್ಪಣೆ ನಡೆಯಿತು. ದೇವಸ್ಥಾನದ ಅರ್ಚಕ ಗಣಪತಿ ಭಟ್ ವೈದಿಕ ವಿದಿವಿಧಾನ ನೆರವೇರಿಸಿದರು.
ರಾತ್ರಿ ಎಂಟು ಗಂಟೆಗೆ ನಾಲ್ಕಾಂಬ ಉಳ್ಳಾಲ್ತಿ ಕ್ಷೇತ್ರದಲ್ಲಿ ಶ್ರೀರಾಮ ಸೋತ್ರ ಪಠಣ ಮಾಡಲಾಯಿತು. ಬಳಿಕ ಪಟಾಕಿ ಸಿಡಿಸಿ ಸಿಹಿ ಹಂಚಲಾಯಿತು. ಶ್ರೀರಾಮ್ ಉತ್ಸವದ ಉಳಿಕೆಯ ಮೊತ್ತವನ್ನು ಅನಾರೋಗ್ಯದಲ್ಲಿದ್ದ ಕುಂಬ್ಲಾಡಿ ಗೋವಿಂದ ಗೌಡ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು