ಪುತ್ತೂರು: ಪುತ್ತೂರು ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವದ ಕಾರ್ಯಕ್ರಮದ ಕುರಿತು ಪೂರ್ವಭಾವಿ ಸಭೆ ಸೋಮವಾರ ಸ್ವಸಹಾಯ ಟ್ರಸ್ಟ್ ಕಚೇರಿಯಲ್ಲಿ ನಡೆಯಿತು.
ಸಭೆಯಲ್ಲಿ ದಶಮಾನೋತ್ಸವದ ಅಂಗವಾಗಿ ಪ್ರತೀ ತಿಂಗಳು ಒಂದು ಕಾರ್ಯಕ್ರಮ ನಡೆಸುವುದರ ಜತೆಗೆ ಪ್ರತೀ ವಲಯದಲ್ಲೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕುರಿತು ತೀರ್ಮಾನಿಸಲಾಯಿತು.
ವೇದಿಕೆಯಲ್ಲಿ ಒಕ್ಕಲಿಗ ಟ್ರಸ್ಟ್ ನ ಡಿ.ವಿ.ಮನೋಹರ, ಎ.ವಿ.ನಾರಾಯಣ, ದಿವ್ಯಪ್ರಸಾದ್ ಎ.ಎಮ್., ವಸಂತ ವೀರಮಂಗಲ, ಜಿನ್ನಪ್ಪ ಗೌಡ ಮಳವೇಲು, ಪದ್ಮಯ್ಯ ಗೌಡ ವಾರಣಾಸಿ, ವೆಂಕಪ್ಪ ಗೌಡ, ಶ್ರೀಧರ ಗೌಡ ಕಣಜಾಲು ಉಪಸ್ಥಿತರಿದ್ದರು.
ಸಭೆಯಲ್ಲಿ ಒಳಮೊಗ್ರು ಗ್ರಾಮ ಸ್ವಸಹಾಯ ಸಂಘದ ಹೂವಪ್ಪ ಗೌಡ, ಕೌಕ್ರಾಡಿ ಸ್ವಸಹಾಯ ಸಂಘದ ಅಧ್ಯಕ್ಷ ಸೇಸಪ್ಪ ಗೌಡ, ಗೋಳಿತೊಟ್ಟು ಒಕ್ಕೂಟದ ಅಧ್ಯಕ್ಷ ಎ.ಕುಶಾಲಪ್ಪ ಗೌಡ ಅನಿಲ, ಗಣೇಶ್ ಪೋಳ್ಯ, ನರಿಮೊಗರು ಒಕ್ಕೂಟದ ಅಧ್ಯಕ್ಷ ಎಂ.ಎಸ್.ಗಂಗಾಧರ ಗೌಡ, ನೆಟ್ಟಣಿಗೆ ಮುಡ್ನೂರು ಒಕ್ಕೂಟದ ಅಧ್ಯಕ್ಷೆ ಕಲಾವಿತಿ ಎಸ್. ಗೌಡ, ಬಲ್ನಾಡು ಒಕ್ಕೂಟದ ಅಧ್ಯಕ್ಷೆ ಗೀತಾ, ಬನ್ನೂರು ಒಕ್ಕೂಟ ಅಧ್ಯಕ್ಷ ಕೆ.ಸೋಮಪ್ಪ ಗೌಡ, ನೆಟ್ಟಮುಡ್ನೂರು ಒಕ್ಕೂಟದ ಅಧ್ಯಕ್ಷ ಡಿ.ಸುಂದರ ಗೌಡ, ಚಿಕ್ಕಮುಡ್ನೂರು ಒಕ್ಕೂಟದ ಅಧ್ಯಕ್ಷ ಕೆ.ತಿಮ್ಮಪ್ಪ ಗೌಡ, ಕುದ್ಮಾರು ಒಕ್ಕೂಟದ ಅಧ್ಯಕ್ಷ ಲಕ್ಷ್ಮಣ ಗೌಡ, ಕೋಡಿಂಬಾಡಿ ಒಕ್ಕೂಟದ ಅಧ್ಯಕ್ಷ ಬಾಬು ಗೌಡ, ಕೊಡಿಪ್ಪಾಡಿ ಒಕ್ಕೂಟದ ಅಧ್ಯಕ್ಷ ರಾಧಾಕೃಷ್ಣ, ಪುತ್ತೂರು ನಗರ ಒಕ್ಕೂಟದ ಅಧ್ಯಕ್ಷೆ ವನಿತಾ, ಪಡ್ನೂರು ಒಕ್ಕೂಟದ ಅಧ್ಯಕ್ಷೆ ಕುಸುಮಾವತಿ, ಪೆರ್ನೆ ಬಿಳಿಯೂರು ಒಕ್ಕೂಟದ ಅಧ್ಯಕ್ಷೆ ನಳಿನಿ, ಸಬಳೂರು ಒಕ್ಕೂಟದ ಅಧ್ಯಕ್ಷೆ ವೇದಾವತಿ ಪಿ.ಎಸ್., ಸವಣೂರು ಒಕ್ಕೂಟದ ಅಧ್ಯಕ್ಷೆ ಅನಿತ ಲಕ್ಷ್ಮಣ ಗೌಡ ಕೆಡೆಂಜಿ, ದೋಲ್ಪಾಡಿ ಒಕ್ಕೂಟದ ಅಧ್ಯಕ್ಷೆ ಸುಗಂಧಿ ಕೆ.ಎಲ್. ಕೂರೇಲು, ಪುಣಚ ಒಕ್ಕೂಟದ ಅಧ್ಯಕ್ಷ ಎನ್.ಬಾಲಕೃಷ್ಣ ನಿಡ್ಯಾಳ, ಆರ್ಯಾಪು ಒಕ್ಕೂಟದ ಅಧ್ಯಕ್ಷ ಲೋಕೇಂದ್ರ ಗೌಡ, ಚಾರ್ವಾಕ ಒಕ್ಕೂಟದ ಅಧ್ಯಕ್ಷ ಗೋಪಾಲಕೃಷ್ಣ ಪಟೇಲ್ ಚಾರ್ವಾಕ ಉಪಸ್ಥಿತರಿದ್ದರು.