ಪುತ್ತೂರು: ಅಯೋಧ್ಯೆ ಶ್ರೀ ರಾಮ ಮಂದಿರದ ಲೋಕಾರ್ಪಣೆ ಪ್ರಯುಕ್ತ ಕೆಮ್ಮಿಂಜೆ ಶ್ರೀರಾಮ ಭಜನಾ ಮಂಡಳಿ ಹಾಗೂ ರಾಮಕ್ಷತ್ರೀಯ ಸೇವಾ ಸಂಘದ ಜಂಟಿ ಆಶ್ರಯದಲ್ಲಿ ಕೆಮ್ಮಿಂಜೆ ಶ್ರೀ ರಾಮ ಭಜನಾ ಮಂದಿರದಲ್ಲಿ ವಿಶೇಷ ಮಹಾಪೂಜೆ ನಡೆಯಿತು.
ಈ ಸಂದರ್ಭದಲ್ಲಿ ಆಗಮಿಸಿದ ರಾಮಭಕ್ತರು ಅಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ಶ್ರೀ ರಾಮನ ಪ್ರಾಣಪ್ರತಿಷ್ಠೆಯನ್ನು ಎಲ್.ಇ.ಡಿ. ಪರದೆ ಮೂಲಕ ವೀಕ್ಷಿಸಿದರು.
ಕಾರ್ಯಕ್ರಮದ ಅಂಗವಾಗಿ ಶ್ರೀರಾಮ ಮತ್ತು ಆಂಜನೇಯ ವೇಷಧಾರಿಗಳನ್ನು ಬೊಳುವಾರಿನಿಂದ ಮೆರವಣಿಗೆ ಮೂಲಕ ಕರೆ ತರಲಾಯಿತು. ಕರಸೇವಕ ಚಂದ್ರಶೇಖರ ರಾವ್ ಬಪ್ಪಳಿಗೆ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಭಜನಾ ಮಂದಿರದ ಅಧ್ಯಕ್ಷ ಶ್ಯಾಮಣ್ಣ, ಭಾಸ್ಕರ ಮರೀಲ್, ರಾಮಕ್ಷತ್ರೀಯ ಸಂಘದ ಅಧ್ಯಕ್ಷ ಸುರೇಶ್ ಕೆಮ್ಮಿಂಜೆ, ಪದಾಧಿಕಾರಿಗಳಾದ ಅರುಣ್ ಕುಮಾರ್ ಅಲಂಕಾರ್, ನಿತಿನ್ ಕುಮಾರ್ ಮಂಗಳಾ, ನವೀನ್ ಪುನರ್ವಸು, ಜಿತೇಂದ್ರ ಕೋಟೆ, ಕಾರ್ತಿಕ್, ಚಂದ್ರಕಾಂತ್, ಯತೀಂದ್ರ, ಶಶಿ ಅತ್ತಾಳ, ವಿಜಯಲಕ್ಷ್ಮೀ, ಮಮತಾ ಆನಂದ್, ಪುಷ್ಪಾ ಟೀಚರ್, ಪ್ರೇಮ ಟೀಚರ್ ಹಾಗೂ ರಾಮ ಭಕ್ತರು ಉಪಸ್ಥಿತರಿದ್ದರು.