ಪುತ್ತೂರು: ಕಾವು ಪುತ್ತಿಲ ಪರಿವಾರ ಘಟಕದ ವತಿಯಿಂದ ಅಯೋಧ್ಯೆಯಲ್ಲಿ ನೆಲೆನಿಂತ ಶ್ರೀ ರಾಮನ ಸಂಭ್ರಮವನ್ನು ಕಾವು ಪಂಚವಟಿ ನಗರದ ಶ್ರೀ ಪಂಚಲಿಂಗೇಶ್ವರ ದೇವರ ಕಟ್ಟೆಯಲ್ಲಿ ಸಂಜೆ ಹಣತೆ ದೀಪಗಳನ್ನು ಹಚ್ಚುವ ಮೂಲಕ ಆಚರಿಸಲಾಯಿತು.

ಪುತ್ತಿಲ ಪರಿವಾರದ ಪದಾಧಿಕಾರಿಗಳು, ಸದಸ್ಯರು ಮತ್ತು ಸಾರ್ವಜನಿಕರೂ ಸೇರಿದಂತೆ ಅನೇಕ ಹಿರಿಯ ರಾಮಭಕ್ತರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಸಂಭ್ರಮಾಚರಣೆಯ ಅಂಗವಾಗಿ ಕಾವು ಮೂರೂ ಪೇಟೆಯಲ್ಲಿ ಪಾಯಸ ಮತ್ತು ಲಾಡು ವಿತರಿಸಲಾಯಿತು.