ಪುತ್ತೂರು: ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನ ವಾರ್ಷಿಕ ನೇಮೋತ್ಸವ ಜ.24 ಬುಧವಾರ ನಡೆಯಲಿದ್ದು, ಎಲ್ಲಾ ಸಿದ್ಧತೆಗಳು ನಡೆದಿದೆ.
ದೈವಸ್ಥಾನ ಹಾಗೂ ಮುಖ್ಯರಸ್ತೆಯಲ್ಲಿ ಸುಮಾರು 500 ಮೀ.ನಷ್ಟು ಉದ್ದಕ್ಕೆ ತಳಿರು ತೋರಣ, ಕೇಸರಿ ಬಂಟಿಂಗ್ಸ್, ವಿದ್ಯುತ್ ಬಲ್ಬುಗಳಿಂದ ಈಗಾಗಲೇ ಸಿಂಗರಿಸಲಾಗಿದೆ.
ನೇಮೋತ್ಸವದ ಅಂಗವಾಗಿ ಬೆಳಿಗ್ಗೆ ಕಾರ್ಜಾಲುಗುತ್ತಿನಲ್ಲಿ ಸ್ಥಳಶುದ್ಧಿ ಹೋಮ, ಕಲಶ ಪ್ರತಿಷ್ಠೆ, ಶ್ರೀ ದೈವಸ್ಥಾನದಲ್ಲಿ ಗಣಹೋಮ, ಶ್ರೀ ದೈವಗಳ ತಂಬಿಲ, ನಾಗತಂಬಿಲ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ಜರಗಲಿದೆ.
ರಾತ್ರಿ 7 ಗಂಟೆಗೆ ಶ್ರೀ ದೈವಗಳ ಮೂಲನೆಲೆ ಕಾರ್ಜಾಲು ಗುತ್ತಿನಿಂದ ಭಂಡಾರು ಬರುವುದು. 9 ಗಂಟೆಗೆ ಗೊಂದಳ ಪೂಜೆ, ರಾತ್ರಿ 12 ಕ್ಕೆ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ನೇಮೋತ್ಸವ ಜರಗಲಿದೆ.
ವಾಹನ ವಾಹನ ಸಂಚಾರದಲ್ಲಿ ಬದಲಾವಣೆ :
ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನನ ವರ್ಷಾವಧಿ ನೇಮೋತ್ಸವದ ಅಂಗವಾಗಿ ಬುಧವಾರ ರಾತ್ರಿ ಮೂಲಸ್ಥಾನ ಕಾರ್ಜಾಲುಗುತ್ತಿನಿಂದ ಶ್ರೀ ದೈವಗಳ ಭಂಡಾರ ಬರುವ ಹಿನ್ನಲೆಯಲ್ಲಿ ಮಾಣಿ-ಮೈಸೂರು ರಾಷ್ಟ್ರೀಯ ಹೆಚ್ಚಾರಿಯಲ್ಲಿ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.
ಪುತ್ತೂರಿನಿಂದ ಮಂಗಳೂರಿಗೆ ತೆರಳುವ ವಾಹನಗಳು ಮಂಜಲ್ಪಡ್ಪು-ಕೊಡಿಪ್ಪಾಡಿ-ಕಬಕ ಮೂಲಕ ತೆರಳುವುದು, ಮಂಗಳೂರಿನಿಂದ ಪುತ್ತೂರು, ಮೈಸೂರು ಕಡೆಗೆ ತೆರಳುವ ವಾಹನಗಳು ಮುರದಿಂದ ರೈಲ್ವೇ ಬ್ರಿಡ್ಜ್‍ಮೂಲಕ ಬನ್ನೂರು, ಪಡೀಲ್ ಮೂಲಕ ತೆರಳುವುದು, ಕಲ್ಲೇಗ ಜಾತ್ರೆಗೆ ಬರುವ ಭಕ್ತಾದಿಗಳು ವಿವೇಕಾನಂದ ಕಾಲೇಜು ಹಾಗೂ ಪಾರ್ಕಿಂಗ್ ನಿಗದಿಯಾದ ಸ್ಥಳದಲ್ಲಿ ಪಾರ್ಕ್‍ಮಾಡತಕ್ಕದ್ದು ಎಂದು ಪ್ರಕಟಣೆ ತಿಳಿಸಿದೆ.