ಪುತ್ತೂರು: ರಾಜಕೀಯದವರು ತಮ್ಮ ಲಾಭಕ್ಕೋಸ್ಕರ ಯಾರದ್ದೋ ಮಕ್ಕಳನ್ನು ಬಲಿಪಶು ಮಾಡುವ ಚಾಲ್ತಿ ಇದ್ದು ಕೆಟ್ಟ ಚಟುವಟಿಕೆಯಲ್ಲಿ ನಿಮ್ಮ ಮಕ್ಕಳು ಭಾಗಿಗಳಾಗಿ ಅವರು ಜೀವನ ಪೂರ್ತಿ ಕೋರ್ಟು, ಕೇಸು ಅಲೆದಾಡದಂತೆ ನೋಡಿಕೊಳ್ಳಿ ಎಂದು ಪುತ್ತೂರು ಶಸಕರಾದ ಅಶೋಕ್ ರೈ ಹೇಳಿದರು.

ಅವರು ಬೊಳ್ಳಾಣ ಆಂಜನೇಯ ಭಜನಾಮಂದಿರದ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜಕೀಯದವರು ತಮ್ಮ ಲಾಭಕ್ಕೆ ಏನು ಬೇಕಾದರೂ ಭಾಷಣ ಮಾಡಬಹುದು. ಅವರ ಭಾಷಣ ಕೇಳಿ ಯುವ ಸಮೂಹ ಹಾಳಾಗದಂತೆ ಎಚ್ಚರವಹಿಸಬೇಕು. ನೀವು ಒಂದು ಬಾರಿ ಕೇಸು ಮೈಮೇಲೆ ಹಾಕಿಕೊಂಡರೆ ಮತ್ತೆ ಜೀವನ ಪೂರ್ತಿ ನೀವಿ ಕೋರ್ಟಿಗೆ ಅಲೆದಾಡಬೇಕಾಗುತ್ತದೆ , ಸಮಾಜದಲ್ಲಿ ಎಲ್ಲರೊಂದಿಗೂ ಅನ್ಯೋನ್ಯತೆಯಿಂದ ಬಾಳಿ ಬದುಕುವ ಮೂಲಕ ಜೀವನ ರೂಪಿಸಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಶ್ರೀ ಆಂಜನೇಯ ಭಜನಾ ಮಂದಿರದ ಅಧ್ಯಕ್ಷರು, ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.