ಪುತ್ತೂರು: ಅಯೋಧ್ಯಾ ಶ್ರೀರಾಮನ ಪ್ರಾಣ ಪ್ರತಿಷ್ಠೆಯ ಅಂಗವಾಗಿ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ, ಲಕ್ಷ್ಮಿ ವೆಂಕಟರಮಣ ದೇವಾಲಯ ಸೇರಿದಂತೆ ಪರಿಸರದ ಬಹುತೇಕ ಎಲ್ಲಾ ದೇವಾಲಯಗಳಲ್ಲಿ ಭಜನಾ ಸೇವೆ ಮತ್ತು ವಿಶೇಷ ಪೂಜಾ ಸೇವೆಗಳು ನಡೆದವು.
ಉಪ್ಪಿನಂಗಡಿ ಸಹಸ್ರಲಿಂಗೇಶ್ಚರ ದೇವಾಲಯದಲ್ಲಿ ಸ್ಥಳೀಯ ಸಹಸ್ರಲಿಂಗೇಶ್ವರ ಹಾಗೂ ಶಾರದಾ ವನಿತಾ ಭಜನಾ ಮಂಡಳಿಯ ನೇತೃತ್ವದಲ್ಲಿ ವಿವಿಧ ಭಜನಾ ತಂಡಗಳಿಂದ ದಿನವಿಡೀ ಭಜನಾ ಸೇವೆ ನಡೆಯಿತು.
ಮುದ್ಯ ಪಂಚಲಿಂಗೇಶ್ವರ ದೇವಾಲಯ, ಪದಾಳ ಸುಬ್ರಹ್ಮಣ್ಯ ದೇವಾಲಯ, ಪೆರಿಯಡ್ಕ ದುರ್ಗಾಪರಮೆಶ್ವರಿ ಭಜನಾ ಮಂದಿರ, ನೆಕ್ಕಿಲಾಡಿಯ ರಾಮ ಭಜನಾ ಮಂದಿರ ಸೇರಿದಂತೆ ಪರಿಸರದ ಬಹುತೇಕ ಎಲ್ಲಾ ದೇವಾಲಯ ಹಾಗೂ ಭಜನಾ ಮಂದಿರಗಳಲ್ಲಿ ವಿಶೇಷ ಪೂಜೆ, ಭಜನಾ ಸೇವೆಗಳು ನಡೆದವು.
ಅಟೋ ರಿಕ್ಷಾ ಚಾಲಕರ ಉಚಿತ ಸೇವೆ:
ಅಯೋಧ್ಯಾ ಶ್ರೀರಾಮನ ಪ್ರಾಣ ಪ್ರತಿಷ್ಠೆಯ ಅಂಗವಾಗಿ ಉಪ್ಪಿನಂಗಡಿಯ ಕುಲ್‌ದೀಪ್ ಸಪಲ್ಯ ಹಾಗೂ ಹಿರೇಬಂಡಾಡಿಯ ಹೊನ್ನಪ್ಪ ಗೌಡ ಪಂಚೇರು ಎಂಬಿಬ್ಬರು ಅಟೋ ಚಾಲಕರು ಉಚಿತ ಸೇವೆಯ ಮೂಲಕ ಶ್ರೀ ರಾಮನನ ಸೇವೆಗೈದರು.