ಪುತ್ತೂರು: ಅಯೋಧ್ಯೆ ಶ್ರೀರಾಮ ಮಂದಿರ ಲೋಕಾರ್ಪಣೆ, ಶ್ರೀರಾಮ ದೇವರ ಪ್ರತಿಮೆ ಪ್ರಾಣ ಪ್ರತಿಷ್ಠೆ ಪ್ರಯುಕ್ತ ಮುಗೇರು ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜ.22 ರಂದು ಶ್ರೀ ರಾಮೋತ್ಸವ ನಡೆಯಿತು.

ಬೆಳಿಗ್ಗೆ 6.00 ರಿಂದ ಶ್ರೀರಾಮ ಜ್ಯೋತಿ ಪ್ರಜ್ವಲನೆ, ಭಜನೆ, ಸತ್ಸಂಗ ರಾಮ ನಾಮದ ಮಹತ್ವ, ಇನ್ನಿತರ ಧಾರ್ಮಿಕ, ವೈಧಿಕ ಕಾರ್ಯಕ್ರಮಗಳು ಜರಗಿತು.

ಕಾರ್ಯಕ್ರಮದಲ್ಲಿ ನೆರೆದಿದ್ದ ರಾಮ ಭಕ್ತರು ನೇರ ಪ್ರಸಾರದ ಮೂಲಕ ಅಯೋಧ್ಯೆ ಕಾರ್ಯಕ್ರಮವನ್ನು ವೀಕ್ಷಿಸಿದರು. ಮಧ್ಯಾಹ್ನ ದೇವರ ಪ್ರಸಾದ ರೂಪದ ಅನ್ನಸಂತರ್ಪಣೆ ನಡೆಯಿತು.