ಮರ್ಕಂಜ ಸರಕಾರಿ ಪ್ರೌಢಶಾಲೆಗೆ ಬೆಂಗಳೂರು ಉಜ್ಜೀವನ್ ಬ್ಯಾಂಕ್‍ ಮೂಲಕ ಹಳೆ ವಿದ್ಯಾರ್ಥಿ ಪ್ರದೀಪ್ ಜೈನ್ ರಿಂದ 9 ಕಂಪ್ಯೂಟರ್ ಹಸ್ತಾಂತರ

ಸುಳ್ಯ: ತಾಲೂಕಿನ ಮರ್ಕಂಜ ಸರಕಾರಿ ಪ್ರೌಢ ಶಾಲೆ ಹಳೆ ವಿದ್ಯಾರ್ಥಿ ಪ್ರದೀಪ್ ಜೈನ್ ಬಲ್ನಾಡುಪೇಟೆ ಅವರು ಶಾಲೆಗೆ 9 ಕಂಪ್ಯೂಟರನ್ನು ಬೆಂಗಳೂರು ಉಜ್ಜೀವನ್ ಬ್ಯಾಂಕ್‍ ಮೂಲಕ ಕೊಡುಗೆಯಾಗಿ ನೀಡಿದರು.

ಪ್ರಸ್ತುತ ಬೆಂಗಳೂರಿನ ಉಜ್ಜೀವನ್ ಬ್ಯಾಂಕ್ ನ ಹೌಸಿಂಗ್ ಲೋನ್ ವಿಭಾಗದಲ್ಲಿ ನ್ಯಾಷನಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಪ್ರದೀಪ್‍ ಜೈನ್ ಗ್ರಾಮಾಂತರ ಭಾಗದ ವಿದ್ಯಾರ್ಥಿಗಳು ಕಂಪ್ಯೂಟರ್ ಕಲಿಕೆಯಲ್ಲಿ ಮುಂದೆ ಬರಬೇಕು ಎಂಬ ಆಶಯದೊಂದಿಗೆ ತಾನು ಕಲಿತ ಶಾಲೆಗೆ 9 ಕಂಪ್ಯೂಟರ್ ಗಳನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮರ್ಕಂಜ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಹೊಸೊಳಿಕೆ, ಮುಖ್ಯ ಶಿಕ್ಷಕಿ ವೀಣಾ ಎಂ.ಟಿ., ಎಸ್‍.ಡಿ.ಎಂ.ಸಿ. ಅಧ್ಯಕ್ಷ ಆನಂದ ಬಾಣೂರು, ಹಿರಿಯರಾದ ತಮ್ಮಪ್ಪ ಗೌಡ ಪೂಂಬಾಡಿ, ಶಿಕ್ಷಕ ವೃಂದ, ಪೋಷಕರು ಉಪಸ್ಥಿತರಿದ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top