ಗ್ಯಾರೇಜ್‍ ಬೀಗ ಒಡೆದು ಕಳ್ಳತನ !

ಪುತ್ತೂರು: ಗ್ಯಾರೇಜ್ ಒಂದರ ಬೀಗ ಒಡೆದು ಒಳಗೆ ನುಗ್ಗಿದ ಕಳ್ಳರು ಸಾವಿರಾರು ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ ಘಟನೆ ಬೆಟ್ಟಂಪಾಡಿ ಗ್ರಾಮದ ಇರ್ದೆಯಲ್ಲಿ ನಡೆದಿದೆ.

ಪ್ರಸಾದ್ ಎಂಬವರ ಮಾಲಕತ್ವದ ಗ್ಯಾರೇಜ್ ಗೆ ರಾತ್ರಿ ಬೀಗ ಹಾಕಿ ಹೋಗಿದ್ದಾರೆ. ತಡರಾತ್ರಿ ಗ್ಯಾರೇಜ್‍ ನ ಬಾಗಿಲು ತೆರೆದಿರುವ ಕುರಿತು ಅವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಅವರು ಬಂದು ನೋಡಿದಾಗ ಗ್ಯಾರೇಜ್‍ನ ಬೀಗ ಮುರಿದು ಅಲ್ಲಿದ್ದ ಸುಮಾರು 69,800 ರೂ. ಮೌಲ್ಯದ ಸೊತ್ತುಗಳನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.

ಈ ಕುರಿತು ಪುತ್ತೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top