ಶ್ರೀರಾಮನ ಸೇವೆಗಾಗಿ ಶ್ರೀರಾಮ ಭಕ್ತರಿಂದ ವ್ಯಾಪಾರ ಸ್ಥಗಿತ | ಪುತ್ತೂರು ಸೆಂಟರ್ ವ್ಯಾಪರಸ್ಥರಿಂದ ಹೀಗೊಂದು ಬ್ಯಾನರ್ ಅಳವಡಿಕೆ

ಪುತ್ತೂರು: ಇಲ್ಲಿನ ಪುತ್ತೂರು ಸೆಂಟರ್ ವ್ಯಾಪರಸ್ಥರು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆಯ ದಿನದಂದು ವ್ಯಾಪಾರ ಸ್ಥಗಿತಗೊಳಿಸಿ, ಶ್ರೀರಾಮಚಂದ್ರನ ಪೂಜಾ ಕೈಂಕರ್ಯದಲ್ಲಿ ಭಾಗವಹಿಸುತ್ತೇವೆ ಎನ್ನುವ ಬ್ಯಾನರ್ ಅಳವಡಿಸಿ ಗಮನ ಸೆಳೆದಿದ್ದಾರೆ.

“||ಜೈ ಶ್ರೀರಾಮ್|| ಶ್ರೀರಾಮನ ಸೇವೆಗಾಗಿ ಸೋಮವಾಗಿ ತಾ. 22.01.2024ರಂದು ವ್ಯವಹಾರ ಸ್ಥಗಿತ. ಪುತ್ತೂರು ಸೆಂಟರ್ ವ್ಯಾಪಾರಸ್ಥರು. ಎಲ್ಲರಿಗೂ ಉತ್ತರೋತ್ತರ ಅಭಿವೃದ್ಧಿಯಾಗಲಿ”

ಹೀಗೆಂದು ಬ್ಯಾನರಿನಲ್ಲಿ ಬರೆಯಲಾಗಿದೆ. ಸೋಮವಾರ ವ್ಯವಹಾರ ಸ್ಥಗಿತಗೊಳಿಸಿ, ಶ್ರೀರಾಮನ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಲು ತೀರ್ಮಾನಿಸಿದ್ದೇವೆ ಎನ್ನುತ್ತಾರೆ ವ್ಯಾಪಾರಸ್ಥರು.



































 
 

ನಿತಿನ್ ಕುಮಾರ್ ಮಂಗಳ, ಸಂಕಪ್ಪ ಗೌಡ, ಕೃಷ್ಣರಾಜ್ ಹೆಗ್ಡೆ, ವಿಜಯ ಹಾರಾಡಿ, ಜಯಂತ್ ಪುತ್ತೂರು ಸೆಂಟರ್, ರಮೇಶ್ ಗಾಣಿಗ, ಕರುಣಾಕರ ಹೋಟೆಲ್ ಶ್ರೀದೇವಿ, ಕಿರಣ್ ಕುಮಾರ್, ರವಿ, ಉದಯ ಕುಮಾರ್, ಹರೀಶ್ ಭಂಡಾರಿ ಅವರು ಬ್ಯಾನರ್ ಅಳವಡಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top