ಪುತ್ತೂರು: ನರಿಮೊಗರು ಗ್ರಾಮದಲ್ಲಿ ರಸ್ತೆ ಅಭಿವೃದ್ಧಿಗೆ ಶಿಲಾನ್ಯಾಸ ಕಾರ್ಯಕ್ರಮ ಶನಿವಾರ ನಡೆಯಿತು.
47 ಲಕ್ಷದ ಕಾಮಗಾರಿಗೆ ಶಾಸಕ ಅಶೋಕ್ ಕುಮಾರ್ ರೈ ಶಿಲಾನ್ಯಾಸ ನೆರವೇರಿಸಿ, ಕಳೆದ ಏಳು ವರ್ಷಗಳಿಂದ ಶ್ರೀ ಮಹಾಲಿಂಗೇಶ್ವರ ದೇವರು ಅವಬೃತ ಸ್ನಾನಕ್ಕೆ ತೆರಳುವ ರಸ್ತೆ ವೀರಮಂಗಲ ರಸ್ತೆಯ ಅಭಿವೃದ್ಧಿ ಕುರಿತು ಏಳು ವರ್ಷಗಳಿಂದ ಬೇಡಿಕೆ ಇತ್ತು. ಈ ರಸ್ತೆಗೆ 5ಲಕ್ಷ ರೂ. ಅನುದಾನ ನೀಡಿದ್ದೇನೆ. ಮುಂದೆ ಇದೇ ರಸ್ತೆಗೆ 15 ಲಕ್ಷ ಅನುದಾನ ನೀಡುವ ಮೂಲಕ ಪೂರ್ತಿಯಾಗಿ ಕಾಂಕ್ರೀಟ್ ಮಾಡಲಾಗುವುದು ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂಬಿ ವಿಶ್ವನಾಥ ರೈ ಮಾತನಾಡಿ, ಪುತ್ತೂರಿನಲ್ಲಿ ಅಭಿವೃದ್ದಿ ಪರ್ವ ಪ್ರಾರಂಭವಾಗಿದೆ. ಎಲ್ಲಾ ಗ್ರಾಮಗಳಿಗೂ ಅನುದಾನವನ್ನು ಮೀಸಲಿಡುವ ಮೂಲಕ ಶಾಸಕರು ಸಮಾನತೆಯನ್ನು ಉಳಿಸಿಕೊಂಡಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡರಾದ ಬಾಬು ಶೆಟ್ಟಿ ವೀರಮಂಗಲ, ಹೊನ್ನಪ್ಪ ಪೂಜಾರಿ ಕೈಂದಾಡಿ, ನರಿಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್, ಬೂತ್ ಅಧ್ಯಕ್ಷ ವಸಂತಪೂಜಾರಿ, ,ಹಿರಿಯ ಕಾಂಗ್ರೆಸ್ ಮುಖಂಡ ವೇದನಾಥ ಸುವರ್ಣ, ಬ್ಲಾಕ್ ಎಸ್ ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ್, ಮಂಜುನಾಥ ಶೇಖ, ಗಂಗಾಧರ್ ಶೆಟ್ಟಿ ಎಲಿಕ, ಜಗದೀಶ್ ಗೌಡ ಎರುಕಡಪ್ಪು, ಲೋಕೇಶ್ ಗೌಡ ಎರುಕಡಪ್ಪು, ಗಣೇಶ್ ದೋಳ, ವಿಜೇತ್ ಗೌಡ, ನಾಗರಾಜ್ ದೋಳ, ಮಹಿಳಾ ಕಾಂಗ್ರೆಸ್ ಘಟಕದ ವಿಶಾಲಾಕ್ಷಿ ಬನ್ನೂರು, ನರಿಮೊಗರು ಗ್ರಾಪಂ ಮಾಜಿ ಅಧ್ಯಕ್ಷೆ ಚಂದ್ರಕಲಾ ಸೇರಿದಂತೆ ಹಲವು ಮಂದಿ ಗ್ರಾಮಸ್ಥರು ಉಪಸ್ಥಿತರಿದ್ದರು.