ಅಯೋಧ್ಯೆ ಶ್ರೀರಾಮ ಪ್ರಾಣ ಪ್ರತಿಷ್ಠೆಯನ್ನು ದೀಪಾವಳಿ ರೀತಿ ಆಚರಿಸಿ | ಪತ್ರಿಕಾಗೋಷ್ಠಿಯಲ್ಲಿ ಡಾ.ಕೃಷ್ಣಪ್ರಸನ್ನ ಕರೆ

ಪುತ್ತೂರು: ಜ.22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮನ ಪ್ರಾಣಪ್ರತಿಷ್ಠೆ ಮಧ್ಯಾಹ್ನ 12.20 ರ ಶುಭ ಮುಹೂರ್ತದಲ್ಲಿ ವಿದ್ಯುಕ್ತವಾಗಿ ನಡೆಯಲಿದ್ದು, ಅಂದು ಪ್ರತೀ ಹಿಂದೂ ಬಾಂಧವರು ತಮ್ಮ ತಮ್ಮ ಮನೆಗಳಲ್ಲಿ ದೀಪಾವಳಿ ಆಚರಣೆ ರೀತಿಯಲ್ಲಿ ಶ್ರೀರಾಮನನ್ನು ಆರಾಧಿಸುವಂತೆ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ ವಿನಂತಿ ಮಾಡಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರಾಣಪ್ರತಿಷ್ಠೆ ದಿನ ಹಿಂದೂ ಬಾಂಧವರು ಕನಿಷ್ಠ ಐದು ದೀಪಗಳನ್ನು ಉತ್ತರಾಭಿಮುಖವಾಗಿ ಬೆಳಗಿಸಿ, ಆರತಿ ಬೆಳಗಿ ಶ್ರೀರಾಮ಻ನನ್ನು ಆರಾಧಿಸಬೇಕು. ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1.30 ರ ವರೆಗೆ ಎಲ್ಲಾ ಹಿಂದೂಗಳು ತಮ್ಮ ವ್ಯವಹಾರ ವಹಿವಾಟುಗಳನ್ನು ಸ್ಥಗಿತಗೊಳಿಸಿ, ಸ್ಥಳೀಯ ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಬೇಕು ಜತೆಗೆ ತಮ್ಮ ತಮ್ಮ ಮನೆ, ಕಚೇರಿ, ಅಂಗಡಿ ಮುಂಗಟ್ಟು, ವಾಹನಗಳಲ್ಲಿ ಭಗವಧ್ವಜವನ್ನು ಹಾರಿಸಬೇಕು, ಶ್ರೀರಾಮನ ಭಾವಚಿತ್ರವನ್ನಿಟ್ಟು ಪೂಜಿಸುವಂತೆ ಅವರು ವಿನಂತಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಬಜರಂಗದಳ ಪ್ರಾಂತ ಸಹಸಂಯೋಜಕ ಮುರಳೀಕೃಷ್ಣ ಹಸಂತಡ್ಕ, ದಿನೇಶ್‍ ಪಂಜಿಗ, ಅಜಿತ್ ರೈ ಹೊಸಮನೆ ಉಪಸ್ಥಿತರಿದ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top